
ಕೋಟ: ಅಕಾಲಿಕ ಮಳೆಯಿಂದ ಕೋಟ ಹೋಬಳಿಯ ಭಾಗದ ಕಲ್ಲಂಗಡಿ ಬೆಳೆ ಸಂಪೂರ್ಣ ಹಾನಿಗೊಂಡಿದ್ದು
ಕಲ್ಲoಗಡಿ ಬೆಳೆಗಾರರ ಕಣ್ಣಿರೊರೆಸಲು ಕುಂದಾಪುರ ಎ.ಸಿ ರಶ್ಮಿ ದಿಢೀರ್ ಭೇಟಿ ನೀಡಿ ಗದ್ದೆಗಳಿದು ರೈತ ಸಮುದಾಯಕ್ಕೆ ಸಾಂತ್ವಾನ ಹೇಳಿದರು.
ಈ ಹಿನ್ನಲ್ಲೆಯಲ್ಲಿ ಭೇಟಿ ನೀಡಿ ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಸಹಿತ ಅಧಿಕಾರಿಗಳ ತಂಡದ ಮೂಲಕ ಕಲ್ಲಂಗಡಿ ಗದ್ದೆಗಿಳಿದು ಕಲ್ಲಂಗಡಿ ಹಾನಿಗೊಂಡ ಕೋಟದ ಹರ್ತಟ್ಟು ಕೃಷಿಕ ಸಿದ್ಧ ದೇವಾಡಿಗ ಇವರಿಂದ ಮಾಹಿತಿ ಪಡೆದರು.
ಈ ವೇಳೆ ಮಾಧ್ಯಮಕ್ಕೆ ಮಾಹಿತಿ ನೀಡಿ ಹಾನಿಗೊಂಡ ಬಗ್ಗೆ ಸಂಬoಧಿಸಿದ ಕೃಷಿ ಹಾಗೂ ತೋಟಗಾರಿಕಾ ಇಲಾಖೆಗೆ ಮಾಹಿತಿ ಕಲೆಹಾಕಲು ಸೂಚಿಸಿದ್ದೇನೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರೀಲಿಸಿ ವರದಿ ನೀಡುತ್ತಾರೆ ಎಂದರು. ಈ ಸಂದರ್ಭದಲ್ಲಿ ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ ಹಾಗೂ ಗ್ರಾಮ ಲೆಕ್ಕಿಗ ಚಲುವರಾಜು ,ತಾಲೂಕು ಯೋಜನಾಧಿಕಾರಿ ಸಂದೇಶ್ ಶೆಟ್ಟಿ ಮತ್ತಿತರರು ಇದ್ದರು.
ಕಲ್ಲಂಗಡಿ ಬೆಳೆಗಾರರ ಕಣ್ಣಿರೊರೆಸಲು ಕುಂದಾಪುರ ಎ.ಸಿ ರಶ್ಮಿ ದಿಢೀರ್ ಭೇಟಿ ನೀಡಿ ಕೋಟದ ಹರ್ತಟ್ಟು ಕೃಷಿಕ ಸಿದ್ಧ ದೇವಾಡಿಗರಿಂದ ಮಾಹಿತಿ ಕಲೆಹಾಕಿದರು.
Leave a Reply