ರಾಣೇಬೆನ್ನೂರು ತಾಲೂಕಿನ ಆರೇ ಮಲ್ಲಪುರ ಗ್ರಾಮದಲ್ಲಿರುವ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನದಲ್ಲಿ ಶ್ರೀ ಶರಣಬಸವೇಶ್ವರ ದೇವರ ಗರ್ಭಗುಡಿಯಲ್ಲಿ ಸೇರಿದಂತೆ 36 ಶ್ರೀ ಶರಣಬಸವೇಶ್ವರ ಮೂರ್ತಿಗಳ ಏಕಕಾಲಕ್ಕೆ ಪ್ರತಿಷ್ಠಾಪನೆಯನ್ನು ಈ ದಿನ ( 28-04-2025 )ರಾಜಯೋಗದಲ್ಲಿ ಮಾಡಲಾಯಿತು.
ಈ ದಿನ ನಡೆದ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಶ್ರೀಮಠದ ಪೀಠಾಧಿಪತಿಗಳಾದ ಡಾ ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿಯವರು ಹಾಗೂ ಶ್ರೀಮಠದ ಉತ್ತರಾಧಿಕಾರಿಗಳಾದ ಶ್ರೀ ಚಿರಂಜೀವಿ ಶರಣಬಸವ ವೇದ ಪ್ರಕಾಶ್ ರವರು ನೇತೃತ್ವವನ್ನು ವಹಿಸಿದರು ಹಾಗೂ ಪರಮಪೂಜ್ಯ ಶ್ರೀ ಷ ಬ್ರ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ನೆಗಳೂರು ರವರಿಂದ ಪ್ರತಿಷ್ಠಾಪನೆ ನಡೆಸಲಾಯಿತು ಮತ್ತು ಗ್ರಾಮದ ಭಕ್ತಾದಿಗಳು ಹಾಗೂ ಶ್ರೀ ಶರಣಬಸವೇಶ್ವರ ಭಕ್ತಾದಿಗಳು ಕೂಡ ಈ ಪುಣ್ಯಕರ್ಮದಲ್ಲಿ ಭಾಗವಹಿಸಿದರು.




















Leave a Reply