ಸಾವಳಗಿ: ಹಿಪ್ಪರಗಿ ಜಲಾಶಯದಿಂದ ಹರಿಸಲಾದ ನೀರು ಗ್ರಾಮದ ಶ್ರಮಬಿಂದು ಸಾಗರವರೆಗೆ ಹರಿದು ಬಂದಿದ್ದರಿಂದ ಈ ಭಾಗದ ರೈತರು ಸಂತಸಗೊಂಡಿದ್ದಾರೆ. ಕೃಷ್ಣಾ ನದಿ ತೀರದ ಗ್ರಾಮಗಳ ಜನ ಜಾನುವಾರುಗಳ ಕುಡಿಯುವ ನೀರಿನ ಅನುಕೂಲಕ್ಕಾಗಿ ಹಿಪ್ಪರಗಿ ಜಲಾಶಯದಿಂದ ನೀರು ಬಿಡುವಂತೆ ಕ.ನೀ.ನಿ. ಅಧೀಕ್ಷಕ ಅಭಿಯಂತರರು ಆದೇಶಿಸಿದ್ದರು.
ಸೋಮವಾರ ಸಂಜೆ 0.30 ಟಿಎಂಸಿ ನೀರು ಬಿಡಲಾಗಿತ್ತು. ಈ ನೀರು ಮಂಗಳವಾರ ಬೆಳಗ್ಗೆ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ತಲುಪಿದ್ದು, ಸುತ್ತಲಿನ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಕೇವಲ ಕುಡಿವ ನೀರಿನ ಉದ್ದೇಶಕ್ಕಾಗಿ ನೀರು ಹರಿಸಲಾಗಿದ್ದು, ರೈತರು ಪಂಪ್ ಸೆಟ್ ಮೂಲಕ ಕೃಷಿಗೆ ನೀರು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ.
ಚಿಕ್ಕಪಡಸಲಗಿ ಶ್ರಮಬಿಂದು ಬ್ಯಾರೇಜ್ ಗೆ ನೀರು



















Leave a Reply