ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಮಿತ್ರ ಮಂಡಳಿ ಕೋಟ ಇವರ ಆಶ್ರಯದಲ್ಲಿ ಕೊಡಮಾಡುವ ಹುಟ್ಟೂರ ಸಾಹಿತ್ಯಸಾಧಕ ಪ್ರಶಸ್ತಿಗೆ ಹಿರಿಯ ಸಾಹಿತಿ,ರಂಗಕಲಾವಿದ,ಶಿಕ್ಷಣ ತಜ್ಞ ಪಾರಂಪಳ್ಳಿ ನರಸಿಂಹ ಐತಾಳ್ ಆಯ್ಕೆಯಾಗಿದ್ದಾರೆ.
ಮೇ 10 ಶನಿವಾರ ಅಪರಾಹ್ನ 3:30ಕ್ಕೆ ಕೋಟದ ಸ.ಹಿ.ಪ್ರಾ. ಶಾಲೆಯ ಕಾರಂತ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಧರ್ಮದರ್ಶಿಗಳಾದ ಡಾ. ನಿ. ವಿಜಯ ಬಲ್ಲಾಳರ ಉಪಸ್ಥಿತಿಯಲ್ಲಿ ಐತಾಳರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಐತಾಳರ ಸಾಹಿತ್ಯಾವಲೋಕನದಲ್ಲಿ ನಾಟಕ ಸಾಹಿತ್ಯದ ಕುರಿತು ಪಿ. ಮಂಜುನಾಥ ಉಪಾಧ್ಯ, ಕಾವ್ಯ ಪ್ರಕಾರಗಳ ಬಗೆಗೆ ಶ್ರೀಮತಿ ಸುಮನ ಹೇರ್ಳೆ, ಸಂಕೀರ್ಣ ಕೃತಿಗಳ ಕುರಿತು ನೀಲಾವರ ಸುರೇಂದ್ರ ಅಡಿಗ, ಸಾಹಿತ್ಯೇತರ ಕ್ಷೇತ್ರದ ಬಗೆಗೆ ಶ್ರೀಪತಿ ಹೇರ್ಳೆ ಮಾಹಿತಿ ನೀಡಲಿದ್ದು, ಗಿಳಿಯಾರು ಶ್ರೀನಿವಾಸ ಅಡಿಗ .ಅಭಿನಂದನೆಯ ನುಡಿಗಳನ್ನಾಡಲಿದ್ದಾರೆ.
















Leave a Reply