ಕೋಟ: ನಂನಮ್ಮೊಳಗೆ ಒಂದು ವಿಶಿಷ್ಟವಾದ ಕಾರ್ಯಕ್ರಮ. ತಿಂಗಳಿಗೊಮ್ಮೆ ಬರೆಹಗಾರರೆಲ್ಲ ಒಟ್ಟಿಗೆ ಸೇರಿ ತಾವು ಬರೆದ ಕಥೆ, ಕವನವಾಚನ,ಗೀತ ಗಾಯನ, ಕಿರಿದಾದ ಹಾಸ್ಯ ಲೇಖನ, ಪ್ರಸ್ತುತ ಸಮಸ್ಯೆ ಮತ್ತು ಪರಿಹಾರದ ಬರೆಹ, ಮೂಲಕ ತಮ್ಮ ಸೃಜನಶೀಲತೆ ಹೊಸ ಆಯಾಮ ಕಂಡು ಕೊಳ್ಳಲು ಅನುಕೂಲವಾಗುವ ಸದಾವಕಾಶ. ಇದೊಂದು ಒಳ್ಳೆಯ ಪ್ರಯತ್ನ ಎಂದು ಹಿರಿಯ ಸಾಹಿತಿ ಪ್ರೊ. ಉಪೇಂದ್ರ ಸೋಮಯಾಜಿ ಅವರು ಅಭಿಪ್ರಾಯಪಟ್ಟರು.
ಇತ್ತೀಚಿಗೆ ಕೋಟ ಹಿರಿಯಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಿತ್ರ ಮಂಡಳಿ ಕೋಟ ಹಾಗೂ ಸ್ಥಿತಿ ಗತಿ ತ್ರೆöÊಮಾಸಿಕ ಪತ್ರಿಕೆ ಕೋಟೇಶ್ವರ ಆಯೋಜಿಸಿದ್ದನಂನಮ್ಮೊಳಗೆ ಸಾಹಿತ್ಯಾವಲೋಕನಕಾರ್ಯಕ್ರಮದಲ್ಲಿ ಮಾತನಾಡಿದರು.
ನೀಲಾವರ ಸುರೇಂದ್ರ ಅಡಿಗ,ಸುವ್ರತಾ ಅಡಿಗ, ಶ್ರೀದೇವಿ ಹಂದೆ,ಡಾ.ಉಮೇಶ್ ಭಟ್, ಕುಚ್ಚೂರು ಜಿ ಲಕ್ಷೀ, ಕೆ ಪುಂಡಲೀಕ ನಾಯಕ್,ಮುಂಜುನಾಥ ಮರವಂತೆ, ಮುಕಾಂಬಿಕಾ ಮಯ್ಯ, ಸೂರ್ಯನಾರಾಯಣ ಚಿತ್ರಪಾಡಿ, ಭಾರತಿ ವಿ ಮಯ್ಯ, ಸುಮನ ಹೇರ್ಳೆ, ನಾಗೇಶ್ ಮಯ್ಯ, ಶ್ರೀಕೃಷ್ಣ ಅಹಿತಾನಲ,ಗಣೇಶ ಮೂರ್ತಿ ಹೆಬ್ಬಾರ್, ಸೋಮಶೇಖರ್ ಶೆಟ್ಟಿ ಗಿಳಿಯಾರ್ ಇವರೆಲ್ಲರೂ ತಾವು ಬರೆದ ಕಥೆ, ಪುಸ್ತಕ , ಅನುಭವ ಕಥನ, ಗೀತ ಗಾಯನ, ಕಿರು ಲೇಖನಗಳನ್ನು ಮಂಡಿಸಿ ನಂನಮ್ಮೊಳಗೆ ಸಾಹಿತ್ಯ ಅವಲೋಕನದಲ್ಲಿ ಭಾಗವಹಿಸಿದ್ದರು.
ಲೇಖಕ ಮರವಂತೆ ಮಂಜುನಾಥ ಅವರು ಮಾತನಾಡಿ ಇದೊಂದು ಅನನ್ಯಕಾರ್ಯಕ್ರಮ. ಲೇಖಕರಿಗೆ ತುಂಬಾ ಉಪಯುಕ್ತ ಎಂದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಮಿತ್ರ ಮಂಡಳಿ ಅಧ್ಯಕ್ಷ ಪ್ರೊ. ಉಪೇಂದ್ರ ಸೋಮಯಾಜಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮನೋಹರ.ಪಿ ವಂದಿಸಿದರು.
ಕೋಟ ಹಿರಿಯಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಿತ್ರ ಮಂಡಳಿ ಕೋಟ ಹಾಗೂ ಸ್ಥಿತಿ ಗತಿ ತ್ರೆöÊಮಾಸಿಕ ಪತ್ರಿಕೆ ಕೋಟೇಶ್ವರ ಆಯೋಜಿಸಿದ್ದ ನಂನಮ್ಮೊಳಗೆ ಸಾಹಿತ್ಯಾವಲೋಕನಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಉಪೇಂದ್ರ ಸೋಮಯಾಜಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮನೋಹರ ಪಿ ಮತ್ತಿತರರು ಇದ್ದರು.
















Leave a Reply