Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ ಗ್ರಾ.ಪಂ ವ್ಯಾಪ್ತಿಯ ಕಳಿಬೈಲಿಗೆ ಬೆಂಕಿ ಅವಘಡ, ಬೆಂಕಿ ನಂದಿಸಲು ಮುಂದಾದ ಸ್ಥಳೀಯಾಡಳಿತದ ಪ್ರತಿನಿಧಿಗಳು, ಗ್ರಾಮಸ್ಥರು, ಅಗ್ನಿಶಾಮಕ ಅವ್ಯವಸ್ಥೆಯ ವಿರುದ್ಧ ಬೇಸರ ಹೊರಹಾಕಿದ ಗ್ರಾಮಸ್ಥರು..!

ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಗ್ರಾ.ಪಂ ವ್ಯಾಪ್ತಿಯ ಕಳಿಬೈಲಿನ ಸುಮಾರು ಹತ್ತು ಎಕ್ಕರೆ ಅಧಿಕ ಹಡಿಲು ಭೂಮಿ ಬೆಂಕಿಗಾಹುತಿ ಪಡೆದ ಘಟನೆ ಶನಿವಾರ ನಡೆದಿದೆ. ಮಣಿಪಾಲದ ಮಾಹೆಗೆ ಸಂಬoಧಿಸಿದ ಸ್ಥಳೀಯರಿಂದ ಖರೀದಿಸಿದ ಸ್ಥಳಗಳು ಕೃಷಿ ಕಾಯಕದಿಂದ ಮುಕ್ತಿಗೊಂಡಿದ್ದು ಸುಮಾರು ಹತ್ತು ಎಕ್ಕರೆ ಮಿಕ್ಕಿ ಪ್ರದೇಶ ಬೆಂಕಿ ಆವರಿಸಿಕೊಂಡಿದೆ ಈ ಬಗ್ಗೆ ಸ್ಥಳೀಯರು ಗ್ರಾ.ಪಂ ಉಪಾಧ್ಯಕ್ಷ ವೈ ಬಿ ರಾಘವೇಂದ್ರ ಹಾಗೂ  ಸದಸ್ಯೆ ಸುಜಾತ ವೆಂಕಟೇಶ ಇವರಿಗೆ ಕರೆ ಮಾಡಿ ತಿಳಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಅಗ್ನಿಶಾಮಕಕ್ಕೆ ಮಾಹಿತಿ.
ಬೆಂಕಿಗಾಹುತಿ ಪಡೆದ ವಿಷಯವನ್ಮು ಗ್ರಾಮಪಂಚಾಯತ್ ಉಪಾಧ್ಯಕ್ಷ ವೈ ಬಿ ರಾಘವೇಂದ್ರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅಗಲ ಕಿರಿದಾದ ರಸ್ತೆಯೊಳಗೆ ಅಗ್ನಿಶಾಮಕ ವಾಹನ ಪ್ರವೇಶಿಸಲಾಗದೆ ಅಸಾಯಕ ಸ್ಥಿತಿಗೆ ತಲುಪಿದೆ ಈ ಹಿನ್ನಲ್ಲೆಯನ್ನು ಮನಗಂಡ ಸ್ಥಳೀಯರು ಸೊಪ್ಪು ಹಿಡಿದು ಬೆಂಕಿ ನಂದಿಸಲು ತಾವೆ ಅಗ್ನಿಶಾಮಕ ದಳದವರೊಂದಿಗೆ ಮುಂದಾಗಿದರು.

ಆಕ್ರೋಶ ಹೊರ ಹಾಕಿದ ಗ್ರಾಮಸ್ಥರು..
ಗ್ರಾಮದಲ್ಲಿ ಬಿದ್ದ ಬೆಂಕಿಯಿoದ ಗಾಬರಿಗೊಂಡ ಗ್ರಾಮಸ್ಥರು ಬೆಂಕಿ ನಂದಿಸಲು ಪಂಚಾಯತ್ ಪ್ರತಿನಿಧಿಗಳ ಸಹಾಯ ಪಡೆದು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದಾರೆ ಆದರೆ ಸ್ಥಳಕ್ಕೆ ವಾಹನ ಪ್ರವೇಶಿಸಲಾಗದೆ ಅಸಾಯಕ ಸ್ಥಿತಿಗೆ ತಲುಪಿದೆ ಈ ಹಿನ್ನಲ್ಲೆಯಲ್ಲಿ ಆಕ್ರೋಶ ಹೊರಹಾಕಿದ ಗ್ರಾಮಸ್ಥರು ಕುಂದಾಪುರ ಅಗ್ನಿಶಾಮಕ ವಾಹನದ ಅವ್ಯವಸ್ಥೆ ಬಗ್ಗೆ ಸಿಬ್ಬಂದಿಗಳನ್ನು ತರಾಟೆ ತೆಗೆದುಕೊಂಡು ಇಂಥಹ ಸಂದಿಗ್ಧ ಸ್ಥಿತಿಯಲ್ಲಿ ಅಗ್ನಿಶಾಮಕ ಪರ್ಯಾಯ ವಾಹನದ ವ್ಯವಸ್ಥೆ ಇಲ್ಲದಿರುವ ಬಗ್ಗೆ ಆಕ್ರೋಶ ಹೊರಹಾಕಿದರು.ಅಲ್ಲದೆ ಆಕಸ್ಮಿಕವಾಗಿ ಬೆಂಕಿಗಾಹುತಿ ಪಡೆದ ಅಗಲ ಕಿರಿದಾದ ಸ್ಥಳಗಳಿಗೆ ಸಂಚರಿಸಲು  ಕುಂದಾಪುರ ವಿಧಾನಸಭಾ ವ್ಯಾಪ್ತಿಗೆ ಒಂದೇ ಅಗ್ನಿಶಾಮಕ ವಾಹನದ ವ್ಯವಸ್ಥೆಯ ಹೊಂದಿದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು ಈ ಬಗ್ಗೆ ಬಹು ವ್ಯಾಪ್ತಿ ಹೊಂದಿದ ಪ್ರದೇಶದಲ್ಲಿ ಸುಸಜ್ಜಿತ ಅಗ್ನಿಶಾಮಕ ವಾಹನ ಕಲ್ಪಿಸಲು ಜಿಲ್ಲಾಡಳಿತ ಹಾಗೂ ಸರಕಾರದ ಜನಪ್ರತಿನಿಧಿಗಳನ್ನು ಆಗ್ರಹಿಸಿವೆ.

ಸಾಸ್ತಾನದ ಪಾಂಡೇಶ್ವರ ಗ್ರಾ.ಪಂ ವ್ಯಾಪ್ತಿಯ ಕಳಿಬೈಲಿನ ಸುಮಾರು ಹತ್ತು ಎಕ್ಕರೆ ಅಧಿಕ ಬರಡು ಭೂಮಿ ಬೆಂಕಿಗಾಹುತಿ ಪಡೆದ ಘಟನೆ ಶನಿವಾರ ನಡೆದಿದೆ.

Leave a Reply

Your email address will not be published. Required fields are marked *