ಕೋಟ: ಛಾಯಾ ತರಂಗಿಣಿ ಸಂಗೀತ ಶಾಲೆ ಕೋಟ ಹರ್ತಟ್ಟು ಇದರ ದಶಮಾನೋತ್ಸವ ಸಂಭ್ರಮ ಇದೇ ಮೇ.15ರಂದು ಕೋಟದ ಕಾರಂತ ಥೀಂ ಪಾರ್ಕನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು,ಗುರುವಂದನಾ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಮಧೂರು ಪಿ ಬಾಲಸುಬ್ರಹ್ಮಣ್ಯಂ , ವಿದುಷಿ ಶರ್ಮಿಳ ರಾವ್ ಇವರುಗಳು ಗುರವಂದನಾ ಗೌರವ ಸ್ವೀಕರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಹಿಸಲಿದ್ದಾರೆ, ಸಾಂಸ್ಕöÈತಿಕ ಕಾರ್ಯಕ್ರಮದ ಭಾಗವಾಗಿ ಛಾಯಾ ತರಂಗಣಿ ವಿವಿಧ ಶಾಖೆಯ ವಿದ್ಯಾರ್ಥಿಗಳಿಂದ ಗಾನ ನಮನ,ಅನಘಾ ಆರ್ ವಿ, ತನ್ಮಯ್ ಬಿಜೂರು, ವಿದ್ವಾನ್ ಮಧೂರು ಪಿ ಬಾಲಸುಬ್ರಹ್ಮಣ್ಯಂ , ವಿದುಷಿ ಶರ್ಮಿಳ ರಾವ್ ಇವರಿಂದ ಕರ್ನಾಟ ಶಾಸ್ತಿçÃಯ ಸಂಗೀತ ಕಾರ್ಯಕ್ರಮ ಜರಗಲಿದೆ.ಎಂದು ಸಂಸ್ಥೆಯ ಮುಖ್ಯಸ್ಥೆ ಭಾಗೇಶ್ವರಿ.ಜಿ ಮಯ್ಯ ತಿಳಿಸಿದ್ದಾರೆ.
















Leave a Reply