ಕೊಡವೂರು ವಾರ್ಡಿನಲ್ಲಿ ಒಟ್ಟು 13 ಕೆರೆಗಳಿದ್ದು, ಅದರಲ್ಲಿ ಒಟ್ಟು 8 ಕೆರೆಗಳನ್ನು ಸಂಘ ಸಂಸ್ಥೆಗಳ ಮೂಲಕ ಹೂಳೆತ್ತುವ ಕಾರ್ಯ ನಡೆದಿದೆ. ಇನ್ನು ಉಳಿದ ಒಂದು ಕೆರೆ ನಿರ್ಮಾಣ ಆಗಿರುತ್ತದೆ. ಎರಡನೆಯ ಕೆರೆ ಲಕ್ಷ್ಮೀ ನಗರ ಗರ್ಡೆ ಪರಿಸರದಲ್ಲಿ ಭೂಮಿ ಪೂಜೆಯು ಮಾನ್ಯ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಯಶ್ ಪಾಲ್ ಸುವರ್ಣ ನಗರಸಭಾ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿ ಮಾಡಿ ಪುನಶ್ಚೇತನಕ್ಕೆ ವಿಶೇಷ ಆದ್ಯತೆ ನೀಡಿ ಅಂತರ್ಜಲ ಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ನಗರಸಭೆ ಮೂಲಕ ಅನುದಾನ ಒದಗಿಸಲಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಕೆರೆ ಪುನಶ್ಚೇತನಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಮಾತನಾಡಿ ಕೊಡವೂರು ವಾರ್ಡಿನಲ್ಲಿ 13 ಕೆರೆಗಳನ್ನು ಸರ್ವೆಯನ್ನು ನಡೆಸಿ,8 ಕೆರೆಗಳನ್ನು ಹೂಳೆತ್ತುವ ಕಾರ್ಯ ಮತ್ತು 2 ಕೆರೆಗಳನ್ನು ಸಂಘ ಸಂಸ್ಥೆಗಳ ಮೂಲಕ ಹೂಳೆತ್ತುವ ಕಾರ್ಯ ಹಾಗೂ ಅದೇ ರೀತಿ 2 ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿರುವ ಕೆರೆಯನ್ನು ಕಾನೂನಾತ್ಮಕವಾದ ಸಂಘಟಿತವಾದ ಹೋರಾಟ ನಡೆಸಿ ಅದನ್ನು ಬಿಡಿಸುವಂತಹ ಕೆಲಸ ಕೊಡುವೂರು ವಾರ್ಡಿನ ಕಾರ್ಯಕರ್ತರು ಮಾಡಿರುತ್ತಾರೆ. ಈ ಕೆರೆಗಳನ್ನು ಅಭಿವೃದ್ದಿ ಕೆಲಸ ಮಾಡುವ ಕಾರ್ಯ ನಡೆಯುತ್ತಿದೆ.
ಇನ್ನು ಮುಂದಿನ ದಿನಗಳಲ್ಲಿ 5 ಕೆರೆಗಳನ್ನು ಶಾಸಕರ ಮುಂದಾಳತ್ವದಲ್ಲಿ, ಕೊಡವೂರಿನ ಕಾರ್ಯಕರ್ತರ ಮೂಲಕ ಅಭಿವೃದ್ದಿ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಸ್ಥಳೀಯ ಪ್ರಮುಖರಾದ ಶ್ರೀ ಭೋಜಣ್ಣ ಲಕ್ಷ್ಮೀ ನಗರ, ಶ್ರೀ ಶೇಖರ ಗರ್ಡೆ, ಶ್ರೀ ರಮೇಶ್ ಗರ್ಡೆ, ಗೆಳೆಯರ ಬಳಗ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್,ರಮೇಶ್ ಗರ್ಡೆ, ವಿನಯ್ ಗರ್ಡೆ, ರಾಜೇಶ್ ಆಚಾರ್ಯ, ಶ್ರೀನಿವಾಸ್ ನಾಯ್ಕ್, ಯೋಗೀಂದ್ರನಾಥ್, ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ್ ಶೆಟ್ಟಿಗಾರ್ , ಗುತ್ತಿಗೆದಾರ ಶ್ರೀ ಉಮೇಶ್ ನಾಯ್ಕ್. ಸ್ಥಳೀಯ ಸಂಘ ಸಂಸ್ಥೆಯ ಸದಸ್ಯರು ಹಾಜರಿದ್ದರು.
















Leave a Reply