
ಕೋಟ: ಸಂಗೀತ ಕ್ಷೇತ್ರದಲ್ಲಿ ಛಾಯಾ ತರಂಗಿಣಿ ಸಾಕಷ್ಟು ಶಿಷ್ಯ ವೃಂದ ಹೊಂದಿದ್ದು ತನ್ನದೆ ಆದ ಅಸ್ತಿತ್ವ ಹೊಂದಿ ಹಲವಾರು ಕಡೆಗಳಲ್ಲಿ ಶಿಷ್ಯ ವೃಂದವನ್ನು ಸೃಷ್ಟಿಸಿ ಕೊಂಡಿದ್ದಾರೆ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ನುಡಿದರು.
ಇತ್ತೀಚಿಗೆ ಕಾರಂತ ಥೀಂ ಪಾರ್ಕನಲ್ಲಿ ಛಾಯಾ ತರಂಗಿಣಿ ಸಂಗೀತ ಶಾಲೆ ಕೋಟ ಹರ್ತಟ್ಟು ಇದರ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಗೀತದ ಮೂಲಕ ಹೊರಜಗತ್ತಿಗೆ ನಮ್ಮನ್ನು ಪರಿಚಯಿಸುವುದರ ಜತೆಗೆ ಪ್ರಸಿದ್ಧಿ ಪಡೆಯಲು ಸಾಧ್ಯ ಈ ನಿಟ್ಟಿನಲ್ಲಿ ಇಲ್ಲಿನ ಸಂಗೀತ ಗುರುಗಳು ಹಾಗೂ ಆ ಸಂಸ್ಥೆ ಮತ್ತಷ್ಟು ಶಿಷ್ಯವೃಂದವನ್ನು ಪಸರಿಸಿಕೊಳ್ಳಲಿ ಎಂದು ಹಾರೈಸಿದರು.
ಗುರುವಂದನಾ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಮಧೂರು ಪಿ ಬಾಲಸುಬ್ರಹ್ಮಣ್ಯಂ ಇವರನ್ನು ಗುರವಂದನಾ ಗೌರವ ಸಲ್ಲಿಸಲಾಯಿತು. 2023-24ನೇ ಸಾಲಿನ ಕರ್ನಾಟ ಶಾಸ್ತಿçÃಯ ಸಂಗೀತದ ಜೂನಿಯರ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ತನ್ಮಯ್ ಬಿಜೂರು ಇವರನ್ನು ಗುರುತಿಸಲಾಯಿತು.
ಅಧ್ಯಕ್ಷತೆಯನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಹಿಸಿ ಶುಭಹಾರೈಸಿದರು. ಸಭೆಯಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ,ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಉಳ್ಳೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಉಡುಪ,ಉದ್ಯಮಿ ಶ್ರೀಕಾಂತ್ ನಾಯಕ್,ಸಾಂಸ್ಕöÈತಿಕ ಚಿಂತಕಿ ಭಾಗ್ಯವಾದಿರಾಜ್, ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ ಮಯ್ಯ ಉಪಸ್ಥಿತರಿದ್ದರು. ಸಂಸ್ಥೆಯ ಗೋಪಾಲಕೃಷ್ಣ ಮಯ್ಯ ಸ್ವಾಗತಿಸಿ ,ಸಂಸ್ಥೆಯ ನಿರ್ದೇಸಕಿ ಭಾಗ್ಯೇಶ್ವರಿ ಮಯ್ಯ ಪ್ರಾಸ್ತಾವನೆ ಸಲ್ಲಿಸಿ, ಸುಜಾತ ಬಾಯರಿ,ನಾಗರತ್ನ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. ಸ್ಮೀತಾ ರಾವ್ ವಂದಿಸಿದರು. ನಂತರ ಸಾಂಸ್ಕöತಿಕ ಕಾರ್ಯಕ್ರಮದ ಭಾಗವಾಗಿ ಛಾಯಾ ತರಂಗಣಿ ವಿವಿಧ ಶಾಖೆಯ ವಿದ್ಯಾರ್ಥಿಗಳಿಂದ ಗಾನ ನಮನ,ಅನಘಾ ಆರ್ ವಿ, ತನ್ಮಯ್ ಬಿಜೂರು, ವಿದ್ವಾನ್ ಮಧೂರು ಪಿ ಬಾಲಸುಬ್ರಹ್ಮಣ್ಯಂ , ವಿದುಷಿ ಶರ್ಮಿಳ ರಾವ್ ಇವರಿಂದ ಕರ್ನಾಟ ಶಾಸ್ತಿçÃಯ ಸಂಗೀತ ಕಾರ್ಯಕ್ರಮ ಜರಗಿತು.
ಇತ್ತೀಚಿಗೆ ಕಾರಂತ ಥೀಂ ಪಾರ್ಕನಲ್ಲಿ ಛಾಯಾ ತರಂಗಿಣಿ ಸಂಗೀತ ಶಾಲೆ ಕೋಟ ಹರ್ತಟ್ಟು ಇದರ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ವಿದ್ವಾನ್ ಮಧೂರು ಪಿ ಬಾಲಸುಬ್ರಹ್ಮಣ್ಯಂ ಇವರನ್ನು ಗುರವಂದನಾ ಗೌರವ ಸಲ್ಲಿಸಲಾಯಿತು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ,ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಮತ್ತಿತರರು ಇದ್ದರು.
Leave a Reply