Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸರಕಾರಿ ಶಾಲೆಯ ಅತಿಥಿ ಶಿಕ್ಷಕರು ಜೂನ್ 13 ರಿಂದ ನಡೆಸಲು ಉದ್ದೇಶಿಸಿರುವ ತರಗತಿ ಬಹಿಷ್ಕಾರಕ್ಕೆ ಖಂಡನೆ

ಸರಕಾರಿ ಶಾಲೆಗಳು ಪ್ರಾರಂಭವಾಗಿದೆ, 5.5 ವರ್ಷದ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಶಾಲೆಯ ಕಡೆ ಬರುತ್ತಾ ಇದ್ದಾರೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆಯಿದೆ ಎನ್ನುವ ದೂರುಗಳ ಮದ್ಯೆಯು  ಪೋಷಕರು ಸರಕಾರಿ ಶಾಲೆಗಳ ಶಿಕ್ಷಣದ ಮೇಲೆ ನಂಬಿಕೆಯಿಟ್ಟು ಮಕ್ಕಳನ್ನು ದಾಖಲಾತಿ ಮಾಡುತ್ತಾ ಇದ್ದಾರೆ..

ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಸರಕಾರವು ಈಗಾಗಲೇ ಅತಿಥಿ ಶಿಕ್ಷಕರನ್ನು ಕೊಟ್ಟಿದ್ದಾರೆ.  ಆರ್ ಟಿ ಈ ಕಾಯ್ದೆಯ ಪ್ರಕಾರ ಶಿಕ್ಷಕರ ಕೊರತೆಯನ್ನು ನೀಗಿಸಲು ಗೌರವ ಅಥವಾ ಅತಿಥಿ ಶಿಕ್ಷಕರನ್ನು ಆಯ್ಕೆ  ಮಾಡುವ ಜವಾಬ್ದಾರಿ ಆಯಾ ಶಾಲೆಯ ಎಸ್ಡಿಎಂಸಿ ಸಮಿತಿಯ ಜವಾಬ್ದಾರಿ ಆಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಸುಮಾರು 10 ವರ್ಷದಿಂದ ಸರಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಣವನ್ನು ಕೊಟ್ಟು ಶಾಲೆಗಳನ್ನು ಉಳಿಸುವ ಕಾರ್ಯದಲ್ಲಿ ಅತಿಥಿ ಶಿಕ್ಷಕರ ಪಾಲು ಕೂಡ ಇದೆ.

ಆದರೆ  ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಕರಡಿಗುಡ್ಡ   ಎಂಬವರು ಈ ಶೈಕ್ಷಣಿಕ ವರ್ಷದ ಜೂನ್ 13 ರಿಂದ ಶಾಲೆಯನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡಲು ಆಹ್ವಾನವನ್ನು ನೀಡಿದ್ದಾರೆ. ಸರಕಾರಿ ಶಾಲೆಗಳ ಶಿಕ್ಷಕರ  ಕೊರತೆಗಳನ್ನು  ನೀಗಿಸುವ ಉದ್ದೇಶದಿಂದ ಸರಕಾರವು ಅತಿಥಿ ಶಿಕ್ಷಕರ ಆಯ್ಕೆಯನ್ನು ಮಾಡುವಾಗ, ಇವರು ಕೂಡ ಸರಕಾರಿ ಶಿಕ್ಷಕರ ಹಾಗೆ ಬೇಡಿಕೆಯನ್ನಿಟ್ಟು ಕೊಂಡು ಶಾಲೆ ಪ್ರಾರಂಭವಾಗಿ 15 ದಿನದ ಒಳಗೆಯೇ ಶಾಲೆಗಳನ್ನು ಬಹಿಷ್ಕರಿಸಲು ಆಹ್ವಾನ ನೀಡುತ್ತಾ ಇರುವುದು ಎಷ್ಟು ಸರಿ?
ಇವರಿಗೆ ಶಾಲೆಯಲ್ಲಿರುವ ಮಕ್ಕಳ ಕಲಿಕೆಗಿಂತಲೂ ಇವರ ಕೆಲಸದ ಬಗ್ಗೆ ಮಾತ್ರ ಕಾಲಜಿಯಿರುವುದು ಇದರಿಂದ ಸಾಬೀತು ಆಗುತ್ತಿದೆ.

ಅತಿಥಿ ಶಿಕ್ಷಕರ ಬೇಡಿಕೆಗಳು ಸರಕಾರದ ಮಟ್ಟದಲ್ಲಿ ನೆರವೇರಿಸಬೇಕಾದದ್ದು ಸರಕಾರದ ಕರ್ತವ್ಯವಾಗಿದೆ.
ಅತಿಥಿಶಿಕ್ಷಕರ ಆಯ್ಕೆಯ ಸಂದರ್ಭದಲ್ಲಿ ಅವರ ಹಿರಿತನವನ್ನು ಪುರಸ್ಕರಿಸುವುದು, ಅವರಿಗೆ ನ್ಯಾಯಯುತವಾದ ಗೌರವಧನವನ್ನು ಒದಗಿಸುವುದು, ಸರಕಾರಿ ಶಿಕ್ಷಕರ ಆಯ್ಕೆಯ ಸಂದರ್ಭದಲ್ಲಿ ಕೂಡ ಇವರನ್ನು ಪರಿಗಣಿಸುವುದು ಇಂತಹ ಬೇಡಿಕೆಗಳು ನ್ಯಾಯಯುತವಾಗಿದ್ದು ಸರಕಾರದ ಹಂತದಲ್ಲಿ ಇವರಿಗೆ ನ್ಯಾಯವನ್ನು ಒದಗಿಸಲು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯು ಆಗ್ರಹಿಸುತ್ತದೆ.

ಆದರೆ ಇವರು ತಮ್ಮ ನ್ಯಾಯಯುತ ಬೇಡಿಕೆಯನ್ನು ಪಡೆದುಕೊಳ್ಳಲು ಮಕ್ಕಳ ಶಿಕ್ಷಣವನ್ನು ಬಳಸಿಕೊಂಡು ಸರಕಾರದ ಮೇಲೆ ಒತ್ತಡ ತರುವುದಾದರೆ ಈ ಪ್ರಕ್ರಿಯೆಯನ್ನು  ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯು ಖಂಡಿಸುತ್ತದೆ ಅಲ್ಲದೆ ಅಂತಹ ಶಿಕ್ಷಕರನ್ನು ಶಾಲೆಯಲ್ಲಿ ಆಯ್ಕೆ ಮಾಡದೆ ಇರಲು ಎಲ್ಲಾ ಎಸ್ಡಿಎಂಸಿ ಹಾಗೂ ಮುಖ್ಯ ಶಿಕ್ಷಕರಲ್ಲಿ ಆಗ್ರಹಿಸುತ್ತದೆ.
ಮಕ್ಕಳ ಶಿಕ್ಷಣವನ್ನು ದಾವೆಗೆ ಇಟ್ಟುಕೊಂಡು ನಡೆಸುವ ಯಾವುದೇ ರೀತಿಯ ಪ್ರತಿಭಟನೆಗಳಿಗೂ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯು ಸಹಕಾರವನ್ನು ಕೊಡುವುದಿಲ್ಲ ಎಂದು ಈ ಮೂಲಕ ವ್ಯಕ್ತ ಪಡಿಸುತ್ತಾ ಇದ್ದೇವೆ.

ಅದಲ್ಲದೆ ಎಲ್ಲಾ ಉಪ ನಿರ್ದೇಶಕರು ಹಾಗೂ ಶಿಕ್ಷಣಾಧಿಕಾರಿಗಳು ಕೂಡ ಶಾಲಾ ಮಕ್ಕಳ ಶಿಕ್ಷಣದ ವಿಷಯದಲ್ಲಿ ರಾಜಿ ಆಗದೆ ,ಮಕ್ಕಳ ಶಿಕ್ಷಣದ ವಿಷಯದಲ್ಲಿ ಕಾಳಜಿಯನ್ನು ತೆಗೆದುಕೊಳ್ಳದೆ ಶಾಲೆಯಿಂದ ಹೊರನಡೆದು ಪ್ರತಿಭಟನೆ ಮಾಡುವಂತಹ ಎಲ್ಲಾ ಶಿಕ್ಷಕರ ಬದಲಿಗೆ ಹೊಸ ಶಿಕ್ಷಕರನ್ನು ಆಯ್ಕೆ ಮಾಡಲು ಶಾಲಾ ಮುಖ್ಯಸ್ಥರು ಹಾಗೂ ಎಸ್ಡಿಎಂಸಿಯವರಿಗೆ ಜ್ಞಾಪನವನ್ನು ಹೊರಡಿಸಲು ಈ ಮೂಲಕ ವಿನಂತಿಸುತ್ತೇನೆ

*ಮೊಯ್ದಿನ್ ಕುಟ್ಟಿ*
*ರಾಜ್ಯ ಸಂಚಾಲಕರು*
*ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)*

Leave a Reply

Your email address will not be published. Required fields are marked *