
ಕೋಟ : ಕೋಟ ವಿದ್ಯಾಸಂಘ ಇದರ ಆಡಳಿತಕ್ಕೆ ಒಳಪಟ್ಟ ವಿವೇಕ ವಿದ್ಯಾ ಸಂಸ್ಥೆಗಳಲ್ಲಿ 17 ವರ್ಷಗಳ ಕಾಲ ಶಿಕ್ಷಕರಾಗಿ, ವಿವೇಕ ಬಾಲಕಿಯರಪ್ರೌಢಶಾಲೆಯಲ್ಲಿ 11ವರ್ಷ ಮುಖ್ಯೋಪಾಧ್ಯಾಯರಾಗಿ , ಒಟ್ಟು 28 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಲಾಖೆ ನಿಯಮದಂತೆ ನಿವೃತ್ತಿ ಹೊಂದಿದ ಜಗದೀಶ ಹೊಳ್ಳ ಕೆ. ಇವರನ್ನು ಕೋಟ ವಿದ್ಯಾಸಂಘ ಮತ್ತು ವಿವೇಕ ಸಿಬ್ಬಂದಿ ವರ್ಗದ ಜಂಟಿ ಆಶ್ರಯದಲ್ಲಿ ಸನ್ಮಾನಿಸಿ ಭಾವಪೂರ್ಣ ವಿದಾಯವನ್ನು ಕೋರಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವಿದ್ಯಾ ಸಂಘದ ಅಧ್ಯಕ್ಷರಾದ ಸಿ.ಎ ಪ್ರಭಾಕರ ಮೈಯರು ವಹಿಸಿದ್ದರು.
ಕಾರ್ಯದರ್ಶಿ ಎಂ.ರಾಮದೇವ ಐತಾಳ ನಿವೃತ್ತರಿಗೆ ಶುಭ ಹಾರೈಸಿದರು. ಕೋಶಾಧಿಕಾರಿ ವೆಲೇರಿಯನ್ಮೇ ನೇಜಸ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ನಳೀನಾಕ್ಷಿ ಅವರು ಪ್ರಾರ್ಥಿಸಿದರು. ನಿವೃತ್ತರ ಕುರಿತಾಗಿ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ಸಹಶಿಕ್ಷಕ ನರೇಂದ್ರ ಕುಮಾರ್ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ನಿವೃತ್ತಿ ಹೊಂದಿ ಸನ್ಮಾನ ಸ್ವೀಕರಿಸಿ ದ ನಿವೃತ್ತ ಮುಖ್ಯೋಪಾಧ್ಯಾಯರಾದ ಜಗದೀಶ ಹೊಳ್ಳ ತಮ್ಮ ವೃತ್ತಿ ಜೀವನದ ಅನುಭವವನ್ನು ವ್ಯಕ್ತಪಡಿಸಿದರು. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥರಾದ ಪ್ರೀತಿ ರೇಖಾ ಇವರು ಧನ್ಯವಾದ ನೀಡಿದರು. ಆಡಳಿತ ಮಂಡಳಿಯ ಇತರ ಸದಸ್ಯರು ,ವಿವೇಕ ವಿದ್ಯಾ ಸಂಸ್ಥೆಗಳ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕ ಪ್ರೇಮಾನಂದ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾಸಂಘ ಇದರ ಆಡಳಿತಕ್ಕೆ ಒಳಪಟ್ಟ ವಿವೇಕ ವಿದ್ಯಾ ಸಂಸ್ಥೆಗಳಲ್ಲಿ 17 ವರ್ಷಗಳ ಕಾಲ ಶಿಕ್ಷಕರಾಗಿ,ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿಹೊಂದಿದ ಜಗದೀಶ ಹೊಳ್ಳ ಕೆ ಇವರಿಗೆ ಬಿಳ್ಕೋಡುಗೆ ನೀಡಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡ, ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ಸಹಶಿಕ್ಷಕ ನರೇಂದ್ರ ಕುಮಾರ್ ಇದ್ದರು
Leave a Reply