
ಕೋಟ: ಜಲಾನಯನ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್-ಉಡುಪಿ, ಕೃಷಿ ಇಲಾಖೆ-ಉಡುಪಿ, ಮೀನುಗಾರಿಕೆ ಇಲಾಖೆ-ಉಡುಪಿ, ಭಾ.ಕೃ.ಅ.ಪ. ಕೃಷಿ ವಿಜ್ಞಾನ ಕೇಂದ್ರ-ಬ್ರಹ್ಮಾವರ, ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಜಂಟಿಯಾಗಿ ಆಯೋಜಿಸಿರುವ ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಾಗಾರ ಮಂಗಳವಾರ ಕೋಡಿ ಕನ್ಯಾಣ ಹೊಸ ಸೇತುವೆ ಕೆಳಗೆ ಇಲ್ಲಿ ಜರಗಿತು
ಕಾರ್ಯಕ್ರಮವನ್ನು ಜಿಲ್ಲಾ ಲೀಡ್ ಬ್ಯಾಂಕ್ ಪ್ರಭಂಧಕ ಹರೀಷ್ ಉದ್ಘಾಟಿಸಿ ಕೃಷಿ ಚಟುವಟಿಕೆಗೆ ಬ್ಯಾಂಕಿAಗ್ ಕ್ಷೇತ್ರದಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಬ್ರಹ್ಮಾವರ ಕೆ.ವಿ.ಕೆ ಇದರ ತೋಟಗಾರಿಕಾ ವಿಭಾಗದ ವಿಜ್ಞಾನಿ ಡಾ.ಭೂಮಿಕಾ ಮಲ್ಲಿಗೆ ಕೃಷಿ ಮತ್ತು ಮೌಲ್ಯವರ್ಧನೆಯಿಂದ ಮಹಿಳೆಯರ ಆರ್ಥಿಕ ಪ್ರಗತಿ ಕುರಿತು ಸಮಗ್ರ ಮಾಹಿತಿ ನೀಡಿದರು.
ಇದೇ ವೇಳೆ ಮೀನುಗಾರ ಮಹಿಳೆಯರಿಗೆ ಮಲ್ಲಿಗೆ ಕೃಷಿ ಬಗ್ಗೆ ನುರಿತ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳಿಂದ ಮಾಹಿತಿ, ಆಸಕ್ತ ಪ್ರತಿ ರೈತರಿಗೆ ಗಿಡಗಳನ್ನು ನೀಡಿ ಪ್ರೋತ್ಸಾಹಿಸುವುದು ರೈತರೊಂದಿಗೆ ಸಂಶೋಧನ ವಿಜ್ಞಾನಿಗಳಿಂದ ಮತ್ತು ಇಲಾಖೆ ಅಧಿಕಾರಿಗಳಿಂದ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಾಗಾರ ಜರಗಿತು.
ಕಾರ್ಯಕ್ರಮದಲ್ಲಿ ಉಡುಪಿ ಕಿನಾರಾ ಮೀನುಗಾರ ಉತ್ಪಾದಕರ ಕಂಪನಿಯ ನಿರ್ದೇಶಕ ಸುದಿನ ಕೋಡಿ,ಅಮೃತೇಶ್ವರೀ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷೆ ಬೇಬಿ ಮೆಂಡನ್,ಸAಪನ್ಮೂಲವ್ಯಕ್ತಿಯಾಗಿ ಅರ್ಪಿತಾ ಬ್ರಹ್ಮಾವರ,ಸಂಜೀವಿ ಸಂಘ ಕೋಡಿ ಇದರ ಅಧ್ಯಕ್ಷೆ ಪೂರ್ಣಿಮಾ,ಪಂಚಾಯತ್ ಸದಸ್ಯೆ ಜಯಶ್ರೀ ಪೂಜಾರಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮತ್ಸ÷್ಯ ವಿಭಾಗದ ವಿಜ್ಞಾನಿ ಡಾ.ಸದಾನಂದ ಆಚಾರ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಜಂಟಿಯಾಗಿ ಆಯೋಜಿಸಿರುವ
ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಾಗಾರ ಜಿಲ್ಲಾ ಲೀಡ್ ಬ್ಯಾಂಕ್ ಪ್ರಭಂಧಕ ಹರೀಷ್ ಉದ್ಘಾಟಿಸಿದರು. ಉಡುಪಿ ಕಿನಾರಾ ಮೀನುಗಾರ ಉತ್ಪಾದಕರ ಕಂಪನಿಯ ನಿರ್ದೇಶಕ ಸುದಿನ ಕೋಡಿ,ಅಮೃತೇಶ್ವರೀ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷೆ ಬೇಬಿ ಮೆಂಡನ್ ಮತ್ತಿತರರು ಇದ್ದರು.
Leave a Reply