
ಕೋಟ: ಕೋಡಿ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ ಪಂಚವರ್ಣ ಸಂಸ್ಥೆ ಕೋಟ, ಗೀತಾನಂದ ಫೌಂಡೇಶನ್ ಮಣೂರು ಇವರ ಸಂಯೋಜನೆಯೊAದಿಗೆ, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಹಾಗೂ ಎಸ್ಎಲ್ಆರ್ಎಂ ಘಟಕ ಕೋಡಿ ಇವರ ಸಹಯೋಗದೊಂದಿ 2ನೇ ವರ್ಷದ ಮೂರು ತಿಂಗಳ ಪರಿಸರ ಸ್ನೇಹಿ ಹಸಿರುಜೀವ ಅಭಿಯಾನ ಕೋಡಿ ಕನ್ಯಾಣದಲ್ಲಿ ಜರಗಿತು.
ಕಾರ್ಯಕ್ರಮಕ್ಕೆ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾಖಾರ್ವಿ, ಸದಸ್ಯರಾದ ಪ್ರಭಾಕರ್ ಮೆಂಡನ್ ಮತ್ತು ಕೃಷ್ಣ ಪೂಜಾರಿಯವರು ಮನೆ ಮನೆಗೆ ಪರಿಸರ ಜಾಗೃತಿ ಮೂಡಿಸಿದರು. ಕೋಡಿಕನ್ಯಾನ ಅಂಗನವಾಡಿ ಕಾರ್ಯಕರ್ತೆ ಪ್ರೀತಿ.ಎಸ್ ಹಾಗೂ ಸಹಾಯಕಿ ಸಂಗೀತಾ, ಸೌಮ್ಯ ಕೃಷ್ಣಮೂರ್ತಿ ನಾವಡರ ಮನಯಿಂದ ಗಿಡ ನಡುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಸರಸ್ವತಿ, ಕೋಡಿ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ .ಪಿ ಹೊಸಬೆಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಲಕ್ಷ÷್ಮಣ್ ಕುಂದರ್, ಸಂಜೀವಿನಿ ಅಧ್ಯಕ್ಷೆ ಪೂರ್ಣಿಮ, ಎಸ್ಎಲ್ಆರ್ಎಂ ಘಟಕ ಸಿಬ್ಬಂದ್ದಿ ಕಿರಣ್ ಪುತ್ರನ್ ಹಾಗೂ ಸ್ಥಳೀಯರು ರಾಜು ಬಂಗೇರ,ರಾಧಾ ಸರೋಜ,ವೇದ, ಕುಸುಮ, ಪೂಜಿತ್ ಮತ್ತಿತರರು ಉಪಸ್ಥಿತರಿದ್ದರು.
ಕೋಡಿ ಕನ್ಯಾಣ ವ್ಯಾಪ್ತಿಯಲ್ಲಿ 2ನೇ ವರ್ಷದ ವಾರದ ಹಸಿರುಜೀವ ಅಭಿಯಾನಕ್ಕೆ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾಖಾರ್ವಿ ಚಾಲನೆ ನೀಡಿದರು. ಸದಸ್ಯರಾದ ಪ್ರಭಾಕರ್ ಮೆಂಡನ್ ಮತ್ತು ಕೃಷ್ಣ ಪೂಜಾರಿ, ಕೋಡಿಕನ್ಯಾನ ಅಂಗನವಾಡಿ ಕಾರ್ಯಕರ್ತೆ ಪ್ರೀತಿ.ಎಸ್ ಹಾಗೂ ಸಹಾಯಕಿ ಸಂಗೀತಾ ಮತ್ತಿತರರು ಇದ್ದರು.
Leave a Reply