
ಕೋಟ: ಇಲ್ಲಿನ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೋಡಿ ಕನ್ಯಾಣ ಭಾಗದಲ್ಲಿ ಇದೇ ಮೊದಲ ಬಾರಿಗೆ ಕೆಲವು ಮನೆಗಳಿಗೆ ನೀರು ಆವರಿಸಿಕೊಂಡಿದೆ.
ಸ್ಥಳೀಯರು ಉಲ್ಲೇಖಿಸುವಂತೆ ಕಡಲ ಕಿನಾರ ಪ್ರದೇಶ ಸಮೀಪ ನೀರು ಆವರಿಸಿಕೊಂಡಿರುವುದು ಇದೇ ಮೊದಲು ಈ ಬಗ್ಗೆ ಗ್ರಾಮದ ಸನಿಹದ ತೊಡು ಹೂಳೆತ್ತದಿರುವುದೇ ಈ ರೀತಿಯ ಸನ್ನಿವೇಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಗ್ರಾಮಪಂಚಾಯತ್ ಶೀಘ್ರ ತೊಡು ಪರಿಶೀಲಿಸಿ ನೀರು ಸರಾಗವಾಗಿ ಹರಿಯಲು ಕ್ರಮಕೈಗೊಳ್ಳುವಂತೆ ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.
Leave a Reply