
ವರದಿ ಪುರುಷೋತ್ತಮ್ ಪೂಜಾರಿ
ದಿನಾಂಕ 11-6-2025ರಂದು ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗುಲ್ವಾಡಿಯಲ್ಲಿ ಶಾಲಾ ಹಳೆವಿದ್ಯಾರ್ಥಿ ಹಾಗೂ ಉದ್ಯಮಿ ಜಿ.ಹಸೈನಾರ್ ರವರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ನೀಡಿದರು. ಶಾಲಾ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರು ಹಾಗೂ ಶಾಲಾ ಮಾಜಿ ಮುಖ್ಯೋಪಾಧ್ಯಾಯರಾದ ರವೀಂದ್ರನಾಥ್ ಶೆಟ್ಟಿಯವರು ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕುಮಾರ್ ಶೆಟ್ಟಿ , ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಜಿ.ಇಸ್ಮಾಯಿಲ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುದೀಶ್ ಕುಮಾರ್ ಶೆಟ್ಟಿ , ಶತಮಾನೋತ್ತರ ದಶಮಾನೋತ್ಸವ ಸಮಿತಿಯ ಖಜಾಂಚಿಯವರಾದ ಐ.ಕೆ.ಇಬ್ರಾಹಿಂ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಅಕ್ಷತಾ, ಗೌರವ ಶಿಕ್ಷಕಿಯರಾದ ಮಲ್ಲಿಕಾ, ಸಂಗೀತ, ಶ್ರೀಮತಿ ವಿದ್ಯಾಶ್ರೀ, ಕುಮಾರಿ ಚಂದ್ರಮತಿ ಮತ್ತು ಪ್ರಸನ್ನ ಕುಮಾರ್, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಲ್ಲಿಕಾರವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ ಧನ್ಯವಾದವನ್ನು ಸಲ್ಲಿಸಿದರು.
Leave a Reply