Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

“ಯಶೋ ಮಾಧ್ಯಮ-2025” ಪ್ರಶಸ್ತಿಗೆ ಕಿರಣ್ ಮಂಜನಬೈಲು ಆಯ್ಕೆ

ಉಡುಪಿ: ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆಯಿಂದ ಉಡುಪಿ ಜಿಲ್ಲೆಯ ಪತ್ರಕರ್ತರ ಸಾಧನೆ ಗುರುತಿಸಿ ಕೊಡಲ್ಪಡುವ “ಯಶೋ ಮಾಧ್ಯಮ- 2025” ಪ್ರಶಸ್ತಿಗೆ ಉಡುಪಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾದ ಕಿರಣ್ ಮಂಜನಬೈಲು ಅವರು ಆಯ್ಕೆಯಾಗಿದ್ದಾರೆ.

ದಿನಾಂಕ: 14-06-2025ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘಗಳ ಒಕ್ಕೂಟ (ರಿ) ನ ರಾಜ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿಯವರು
ದೀಪ ಪ್ರಜ್ವಲಿಸಲಿರುವರು. ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನಂತ ಪದ್ಮನಾಭ ಕಿಣಿ, ಸ್ಕೌಟ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯ ಸ್ಕೌಟ್  ಆಯುಕ್ತರಾದ ಜನಾರ್ದನ್ ಕೊಡವೂರು, ಉದ್ಯಾನ ವಿನ್ಯಾಸಕರಾದ ಯು.ಲೋಕೇಶ್ ಪೂಜಾರಿ, ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸಂಯೋಜಕರಾದ  ಸುಬ್ರಹ್ಮಣ್ಯ ಕಾರಂತ್,
ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ನ ಸಹಾಯಕ ಪ್ರಾಧ್ಯಾಪಕರಾದ ಡಾ.ಮರಿಯಾ ಪಾಯಸ್,   ಜಿ.ಎಸ್.ಬಿ. ಸಭಾ, ಕಲ್ಯಾಣಪುರದ ಅಧ್ಯಕ್ಷರಾದ ಸಂತೋಷ್ ಕಾಮತ್, ಸ್ಪಂದನಾ ಸೇವಾ ಸಂಸ್ಥೆಯ ಖಜಾಂಚಿ ರಜನಿ.ವಿ.ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *