
ಕೋಟ: ಸಿಂಧೂರ ಸಂಜೀವಿನಿ ಒಕ್ಕೂಟ ಕೋಟತಟ್ಟು ಗ್ರಾಮ ಪಂಚಾಯತ್ನ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಪಂಚಾಯತ್ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು. ಒಕ್ಕೂಟದ ಅಧ್ಯಕ್ಷೆ ಸಂಗೀತ ಅಧ್ಯಕ್ಷತೆ ವಹಿಸಿದ್ದರು
ಕೋಟತಟ್ಟು ಗ್ರಾಮ ಪಂಚಾಯತ್ನ ಅಧ್ಯಕ್ಷ ಸತೀಶ್ ಕುಂದರ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಅವರು ಪ್ರಸ್ತಾವಿಕ ಮಾತುಗಳನ್ನಾಡಿ ಸಂಜೀವಿನಿ ಸದಸ್ಯರು ಸರ್ಕಾರ ದಿಂದ ಸಿಗುವ ಯೋಜನೆ ಯಾ ಮಾಹಿತಿ ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವಾಸು ಪೂಜಾರಿ, ವಿದ್ಯಾ ಸಾಲ್ಯಾನ್, ರೋಬರ್ಟ್, ಕಾರ್ಯದರ್ಶಿ ಸುಮತಿ ಅಂಚನ್, ಎನ್ಎಲ್ಆರ್ಎಂ ಘಟಕದ ಬ್ರಹ್ಮವರ ವಲಯ ಮೇಲ್ವಿಚಾರಕಿ ಸ್ವಾತಿ ಕುಮಾರಿ, ಆರ್ಥಿಕ ಸಾಕ್ಷರತೆ ತಂಡದ ಸಂಯೋಜಕಿ ಅರ್ಪಿತಾ, ರೈತ ಸಂಪರ್ಕ ಕೇಂದ್ರ ಬ್ರಹ್ಮಾವರ ಅಧಿಕಾರಿ ಅನುಷಾ, ಫಸಲ್ಭೀಮಾ ವಿಮಾ ಜಿಲ್ಲಾ ಸಂಯೋಜಕ ರವೀಂದ್ರ ಮೊಗವೀರ , ರುಡ್ಸೆಟ್ ಸಂಸ್ಥೆಯ ಬೊಮ್ಮಯ್ಯ, ಕೃಷಿ ಇಲಾಖೆ ಶಿವರಾಜ್ ಹಾಗೂ ಜ್ಯೋತಿ ಉಪಸ್ಥಿತರಿದ್ದರು.
ಇದೇ ವೇಳೆ ಪದಾಧಿಕಾರಿಗಳ ಬದಲಾವಣೆ ಮಾಡಲಾಯಿತು ಅಧ್ಯಕ್ಷರಾಗಿ ಮಾಲಿನಿ, ಉಪಾಧ್ಯಕ್ಷರಾಗಿ ಪಾವನ,ಕಾರ್ಯದರ್ಶಿ ಲಲಿತಾ ಜೊತೆ ಕಾರ್ಯದರ್ಶಿ ಸವಿತಾ, ಕೋಶಾಧಿಕಾರಿ ರೂಪ ಆಯ್ಕೆಗೊಳಿಸಿ ದಾಖಲೆಗಳನ್ನು ಹಸ್ತಾಂತರಿಸಲಾಯಿತು
ಕಾರ್ಯಕ್ರಮವನ್ನು ಸಂಜೀವಿನಿ ಸಂಘದ ವಸಂತಿ, ಸ್ವಾಗತಿಸಿ,ಎಲ್ಸಿಆರ್ಪಿ ಸುಜಾತಾ,ಸಭೆಯ ನಡವಳಿ ವಾಚಿಸಿ, ವಸಂತಿ, ಕಾರ್ಯಕ್ರಮ ಸಂಯೋಜಿಸಿದರು.ಎAಬಿಕೆ ವಾಣಿಶ್ರೀ 2024-25 ನೇ ಜಮಾ – ಖರ್ಚು, ವಾರ್ಷಿಕ ವರದಿ ಮಂಡಿಸಿದರು, ಸಂಘದ ಶ್ಯಾಮಲ ಪುತ್ರನ್ ವಂದಿಸಿದರು.
ಕೋಟತಟ್ಟು ಗ್ರಾಮ ಪಂಚಾಯತ್ನ ಸಿಂಧೂರ ಸಂಜೀವಿನಿ ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ನ ಅಧ್ಯಕ್ಷ ಸತೀಶ್ ಕುಂದರ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಗ್ರಾಮ ಪಂಚಾಯತ್ ಸದಸ್ಯರಾದ ವಾಸು ಪೂಜಾರಿ, ವಿದ್ಯಾ ಸಾಲ್ಯಾನ್, ರೋಬರ್ಟ್, ಕಾರ್ಯದರ್ಶಿ ಸುಮತಿ ಅಂಚನ್, ಎನ್ಎಲ್ಆರ್ಎಂ ಘಟಕದ ಬ್ರಹ್ಮವರ ವಲಯ ಮೇಲ್ವಿಚಾರಕಿ ಸ್ವಾತಿ ಕುಮಾರಿ ಇದ್ದರು.
Leave a Reply