Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸಹಕಾರಿ ವ್ಯವಸಾಯಕ ಸಂಘದಲ್ಲಿ ಅಂತರಾಷ್ಟ್ರೀಯ  ಸಹಕಾರ ವರ್ಷಾಚರಣೆ, ಏಕ್ ಪೇಡ್ ಮಾ ಕೆ ನಾಮ್” ಗಿಡನೆಡುವ ಸಂಕಲ್ಪ ಯೋಜನೆ
ಪ್ರಕೃತಿಯ ಬಗ್ಗೆ ನೈಜ ಕಾಳಜಿ ಹೊಂದಿ – ಜಗದೀಶ್ ಹೊಳ್ಳ

ಕೋಟ: ಪ್ರಕೃತಿಯ ಬಗ್ಗೆ ಆಲೋಚಿಸುವ ದಿನಗಳು ಕಣ್ಣೆದುರೆ  ಬಂದು ನಿಂತಿದೆ ಆದರೆ ಹೆಸರಿಗೆ ಗಿಡ ನಡುವ ಕಾಯಕ ಸೀಮಿತಗೊಳ್ಳದೆ ನಿರಂತರ ಗಿಡಮರದ ಪೋಷಣೆ ಆಗಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲ ಜಗದೀಶ್ ಹೊಳ್ಳ ಹೇಳಿದರು.

ಶನಿವಾರ ಕೋಟ ಸಹಕಾರಿ ವ್ಯವಸಾಯಕ ಸಂಘದ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು ಹಾಗೂ ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ಮತ್ತು ಉಡುಪಿ ಜಿಲ್ಲಾ ಸಹಕಾರ ಯೂನಿಯನ್  ಉಡುಪಿ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ಸಹಕಾರ ಇಲಾಖೆ, ಉಡುಪಿ ಜಿಲ್ಲೆ ಇವರ  ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ — 2025 ಏಕ್ ಪೇಡ್ ಮಾ ಕೆ ನಾಮ್” ಗಿಡನೆಡುವ ಸಂಕಲ್ಪ ಹಸಿರು ಪರಿಸರ ನಿರ್ಮಿಸುವ ಕಾಯಕಲ್ಪ ಕಾರ್ಯಕ್ರಮವನ್ನು   ಉದ್ಘಾಟಿಸಿ ಮಾತನಾಡಿ ಕೋಟ ಸಹಕಾರ ವ್ಯವಸಾಯಕ ಸಂಘದ ಅಧ್ಯಕ್ಷರಾದ ಡಾ.ಕೃಷ್ಣ ಕಾಂಚನ್ ರವರು ಕದ್ರ ಕಾಲೇಜಿನ ಸಮೀಪ ವನಸಂಪತ್ತನ್ನು ನಿರ್ಮಿಸಿದ್ದಾರೆ ಇದು ಅತ್ಯಂತ ಶಾಘನೀಯ ಕಾರ್ಯ ಇಂಥಹ ಮನಸ್ಸುಗಳು ಹೆಚ್ಚಬೇಕು ಎಂದರು.

ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಜಿಲ್ಲಾ ಸಹಕಾರ ಯೂನಿಯನ್  ಉಡುಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್, ಪರ್ಸಿಯನ್ ಸೊಸೈಟಿ ಅಧ್ಯಕ್ಷ ರಾಜೇಂದ್ರ ಸುವರ್ಣ, ಕೋಟ ಸಹಕಾರ ವ್ಯವಸಾಯಕ ಸಂಘದ ಉಪಾಧ್ಯಕ್ಷ ನಾಗರಾಜ್ ಹಂದೆ,ಕೆ.ಎಂ.ಎಫ್ ನಿರ್ದೇಶಕ ಶಿವಮೂರ್ತಿ ಉಪಾಧ್ಯಾ, ಕೋಟ ಸಹಕಾರಿ ವ್ಯವಸಾಯಕ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೋಭಾ ಶೆಟ್ಟಿ, ನಿರ್ದೇಶಕರುಗಳಾದ ರವೀಂದ್ರ ಕಾಮತ್, ಅಜಿತ್ ದೇವಾಡಿಗ, ಶೇಖರ್ ಮರಕಾಲ ,ದಿನಕರ ಶೆಟ್ಟಿ, ರಶ್ಮಿತಾ, ಉಮಾ ಗಾಣಿಗ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿಬ್ಬಂದಿ ಮಂಜುನಾಥ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಸಹಾಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಕಾಂಚನ್ ವಂದಿಸಿದರು.

Leave a Reply

Your email address will not be published. Required fields are marked *