
ಕೋಟ: ಶೈಕ್ಷಣಿಕ ಲೋಕದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ವಿವೇಕ ವಿದ್ಯಾಸಂಸ್ಥೆಗಳ ಅನನ್ಯ ಸಾಧನೆಗಳಿಗೆ ಇಲ್ಲಿನ ಅಧ್ಯಾಪಕರ ಶ್ರೇಷ್ಠತೆಯೇ ಕಾರಣವೆಂದು ಖ್ಯಾತ ಶಿಕ್ಷಣ ತಜ್ಞ ಮುನಿರಾಜ ರೆಂಜಾಳ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಯನಶೀಲತೆಯೇ ಅಧ್ಯಾಪಕನ ಪ್ರಧಾನ ಲಕ್ಷಣವಾಗಿರಬೇಕೆಂದು ತಿಳಿಸಿದ ಅವರು, ಜೀವಂತ ನಿದರ್ಶನಗಳೊಂದಿಗೆ ಬೋಧನೆಯ ಸೂಕ್ಷ÷್ಮ ವಿಚಾರಗಳ ಕುರಿತು ಬೆಳಕು ಚೆಲ್ಲಿ, ಅಧ್ಯಾಪಕರು ಸದಾ ಆತ್ಮಾವಲೋಕನಕ್ಕೆ ತೆರೆದುಕೊಳ್ಳಬೇಕೆಂದು ಕರೆ ನೀಡಿದರು.
ಇತ್ತೀಚಿಗೆ ಕೋಟದ ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಸಂಘವು ವಿವೇಕ ವಿದ್ಯಾಸಂಸ್ಥೆಗಳ ಅಧ್ಯಾಪಕರಿಗಾಗಿ ಆಯೋಜಿಸಿದ್ದ ಗುರುವಿನ ಗುರಿ’ ವಿಚಾರಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಇನ್ನೊಬ್ಬ ಸಂಪನ್ಮೂಲವ್ಯಕ್ತಿ ಡಾ. ಪ್ರಭಾತ್ ಬಲ್ನಾಡ್ ಇವರು ಪ್ರತಿಭಾವಂತ ಮಕ್ಕಳೊಂದಿಗೆ ಭಾವನಾತ್ಮಕ, ಸಾಮಾಜಿಕ ಕಳಕಳಿ ಹೊಂದಿರುವ ಮತ್ತು ನಕಾರಾತ್ಮಕ ಮಕ್ಕಳಿರುತ್ತಾರೆ. ಸಹಜವಾದ ಭಿನ್ನತೆ ಹೊಂದಿರುವ ಇವರ ನಡುವೆ ಹೋಲಿಕೆ ಸಲ್ಲದು. ಇವರನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ಮಕ್ಕಳ ಸಾಧನೆಯನ್ನು ಗುರುತಿಸುವಾಗ ಅವರ ಹಿನ್ನೆಲೆಯ ಅರಿವಿರಬೇಕು. ನಕಾರಾತ್ಮಕ ಮನೋಭಾವದ ಮಕ್ಕಳ ಕುರಿತು ರಕ್ಷೆಯಾಗುವ ಪ್ರತಿಬಂಧಕ ಯೋಜನೆಗಳನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾಸಂಘದ ಅಧ್ಯಕ್ಷ ಪ್ರಭಾಕರ ಮಯ್ಯರು ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂಪನ್ಮೂಲ ಕ್ರೋಢೀಕರಿಸಲು ನೆರವು ನೀಡಿದ ಹಿಂದಿನ ವಿದ್ಯಾರ್ಥಿ ಸಂಘ ಅಧ್ಯಾಪಕರನ್ನು ಸಂಪನ್ಮೂಲವಾಗಿಸಬಲ್ಲ ತರಬೇತಿಯನ್ನು ಆಯೋಜಿಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಸಂಘದ ಚಟುವಟಿಕೆಗಳು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿರುವುದರ ಕುರಿತು ಮೆಚ್ಚುಗೆಯ ಮಾತುಗಳಾಡಿದ ವಿದ್ಯಾಸಂಘದ ಕಾರ್ಯದರ್ಶಿ ಎಂ ರಾಮದೇವ ಐತಾಳರು ಮುಂದಿನ ದಿನಗಳಲ್ಲಿ ಈ ಬಂಧ ಮುಂದುವರಿಯುವ ಆಶಯ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡ ಸ್ವಾಗತಿಸಿದರು. ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಧಾಕರ ಪಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷ ರಮಾನಂದ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಗಳ ಅಧ್ಯಾಪಕ ವೃಂದದವರೆಲ್ಲರೂ ಸಕ್ರಿಯವಾಗಿ ಭಾಗವಹಿಸಿದ್ದರು.
ಇತ್ತೀಚಿಗೆ ಕೋಟದ ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿ ಸಂಘವು ವಿವೇಕ ವಿದ್ಯಾಸಂಸ್ಥೆಗಳ ಅಧ್ಯಾಪಕರಿಗಾಗಿ ಆಯೋಜಿಸಿದ್ದ ಗುರುವಿನ ಗುರಿ’ ವಿಚಾರಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಶಿಕ್ಷಣ ತಜ್ಞ ಮುನಿರಾಜ ರೆಂಜಾಳ ಭಾಗವಹಿಸಿದರು. ಪ್ರಾಂಶುಪಾಲ ಕೆ. ಜಗದೀಶ ನಾವಡ , ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಧಾಕರ ಪಿ,ಸಂಪನ್ಮೂಲವ್ಯಕ್ತಿ ಡಾ. ಪ್ರಭಾತ್ ಬಲ್ನಾಡ್ ಇದ್ದರು.
Leave a Reply