
ಕೋಟ: ಕೋಡಿತಲೆ ಹೊಸಬೆಂಗ್ರೆ ಪಂಚಶಕ್ತಿ ಸಂಘ ಇದರ 23ನೇ ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಶ್ರೀ ಶಂಕರಾ ಜಯಂತಿ ಪೂಜಾ ಕಾರ್ಯಕ್ರಮ ಇತ್ತೀಚಿಗೆ ಕೋಡಿತಲೆ ಶಾಲೆಯಲ್ಲಿ ನಡೆಯಿತು.
ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಉಪಾಧ್ಯಕ್ಷ ರಾಘವೇಂದ್ರ ಎನ್. ಖಾರ್ವಿ ಬೆಂಗಳೂರು ಮಾತನಾಡಿ ಮಕ್ಕಳು ಮೊಬೈಲ್ ಗಿಳಿನಲ್ಲಿ ತೊಡಗಿಕೊಳ್ಳುವುದು ವಿಪರ್ಯಾಸದ ಸಂಗತಿ ಈ ಬಗ್ಗೆ ಹೆತ್ತವರು ಜಾಗೃತೆವಹಿಸಿ ಮಕ್ಕಳು ದಾರಿ ತಪ್ಪದಂತೆ ಜಾಗೃತಿ ವಹಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು.
ಕಾರ್ಯಕ್ರಮದ ದೀಪ ಪ್ರಜ್ವಲನ ಮಾಡಿದ ಖ್ಯಾತ ಸಾಹಿತಿ ಅಂಶುಮಾಲಿ ತಮ್ಮ ಕಥೆ -ಕವನ-ಹಾಡುಗಳ ಮೂಲಕ ಮಕ್ಕಳನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರ ಪೂಜೆ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ ಕುಮಾರಿ ಸಿಂಚನ ಹೊಸಬೆಂಗ್ರೆ ಹಾಗೂ ಎಸ್.ಎಸ್. ಎಲ್.ಸಿ.ಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ. ವಿಲಾಸ್ ಖಾರ್ವಿ ಕೋಡಿಕನ್ಯಾನ ಇವರನ್ನು ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೋಡಿತಲೆ ಕೊಂಕಣಿ ಖಾರ್ವಿ ಸಮಾಜದ ಹಿರಿಯ ಮುಖಂಡ ನಾರಾಯಣ ಖಾರ್ವಿ, ಶ್ರೀ ಯಕ್ಷೇಶ್ವರಿ ಭಜನಾ ಮಂಡಳಿ ಕೋಡಿತಲೆ ಇದರ ಅಧ್ಯಕ್ಷ ಬಸವ ಖಾರ್ವಿ , ಕೋಡಿತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ ಎಂ.ಸಿ.ಅಧ್ಯಕ್ಷ ರಾಮ ಖಾರ್ವಿ, ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ನಾಗರತ್ನ ಎಸ್ , ಸಂಘದ ಉಪಾಧ್ಯಕ್ಷ ಪ್ರವೀಣ್ ಡಿ.ಖಾರ್ವಿ, ಕಾರ್ಯದರ್ಶಿ ಸಂದೀಪ್ ಎಸ್. ಖಾರ್ವಿ, ಪದಾಧಿಕಾರಿಗಳಾದ ಅನಿಲ ಖಾರ್ವಿ,ವಿಕೇಶ್ ಬಂಗೇರ, ಸಂದೇಶ್ ಖಾರ್ವಿ , ಶಿವರಾಜ್ ಖಾರ್ವಿ ಮತ್ತು ಸದಸ್ಯರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಶಾಲೆಯ ಸಹಶಿಕ್ಷಕಿ ಸುಪ್ರೀತ ಖಾರ್ವಿ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು. ಸಂಘದ ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕೋಡಿತಲೆ ಹೊಸಬೆಂಗ್ರೆ ಪಂಚಶಕ್ತಿ ಸಂಘ ಇದರ 23ನೇ ವಾರ್ಷಿಕೋತ್ಸವ ಉಚಿತ ಪುಸ್ತಕ ವಿತರಣೆ ಹಾಗೂ ಶ್ರೀ ಶಂಕರಾ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ ಕುಮಾರಿ ಸಿಂಚನ ಹೊಸಬೆಂಗ್ರೆ ಹಾಗೂ ಎಸ್.ಎಸ್. ಎಲ್.ಸಿ.ಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ. ವಿಲಾಸ್ ಖಾರ್ವಿ ಕೋಡಿಕನ್ಯಾನ ಇವರನ್ನು ಅಭಿನಂದಿಸಲಾಯಿತು.
Leave a Reply