
ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗುಂಡ್ಮಿ ಶ್ರೀ ಭಗವತಿ ಅಮ್ಮನವರ ದೇವಸ್ಥಾನದ ಎದುರಿನಿಂದ ಆತನಕೆರೆಗೆ ಹೋಗುವ ಮಾರ್ಗದ ಮಧ್ಯದಲ್ಲಿ ಸಂಕ ಸಂಪೂರ್ಣ ಕುಸಿದಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತುರ್ತು ಸ್ಪಂದನೆ ನೀಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಸುಕನ್ಯಾ ಶೆಟ್ಟಿ ಅವರು ಅಧಿಕಾರಿಗಳ ತಂಡದೊoದಿಗೆ ಭೇಟಿ ನೀಡಿ ಕಾಲು ಸಂಕ ಸರಿಪಡಿಸುವ ಬಗ್ಗೆ ಭರವಸೆ ನೀಡಿದರು.
ಕೃಷಿ ಕಾಯಕಕ್ಕಾಗಿ ವರ್ಷವಿಡೀ ಅದೇ ಕಾಲು ಸಂಕದ ಮೇಲೆ ರೈತರು ಸಂಚರಿಸುತ್ತಿದ್ದು ಪಟ್ಟಣಪಂಚಾಯತ್ ಶೀಘ್ರ ಸ್ಪಂದಿಸಿದ್ದಕ್ಕೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ವೇಳೆ ಉಪಾಧ್ಯಕ್ಷೆ ಗಿರಿಜ ಪೂಜಾರಿ ,ಅಧಿಕಾರಿ ವರ್ಗ ಇದ್ದರು
Leave a Reply