Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸರಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ ಹರ್ಷ- ಆನಂದ್ ಸಿ ಕುಂದರ್

ಕೋಟ: ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಅಂತಯೇ ನಮ್ಮ ಕರಾವಳಿಯ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ ಗೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಮಣೂರು ಪಡುಕರೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹರ್ಷ ವ್ಯಕ್ತಪಡಿಸಿದರು.

ಶನಿವಾರ ಕೋಟದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗೀತಾನಂದ ಫೌಂಡೇಶನ್ ಕೊಡಮಾಡಿದ  ವಿವಿಧ ಕೊಡುಗೆ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿ ಇಲ್ಲಿಗೆ ಕಾಲೇಜು ತರಬೇಕೆನ್ನುವ ಕನಸು ಸಾಕಾರಗೊಂಡಿದೆ ಪಿಯು ಕಾಲೇಜು ನಮ್ಮ ಕರಾವಳಿಯ ಕನಸಿನ ಕೂಸಾಗಿದೆ, ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವವರು ಬಡ ಹಾಗೂ ಮಧ್ಯಮವರ್ಗದವರಾಗಿದ್ದಾರೆ ಈ ಹಿನ್ನಲ್ಲೆಯಲ್ಲಿ ಗೀತಾನಂದ ಫೌಂಡೇಶನ್ ಎಲ್ಲಾ ರೀತಿಯ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಿದೆ ಎಂದರಲ್ಲದೆ ವಿದ್ಯಾರ್ಥಿಗಳು ಸುಸಂಸ್ಕöತರಾಗಿ ಹೊರಹೊಮ್ಮಬೇಕು ಆ ಮೂಲಕ ಸಮಾಜಕ್ಕೆ ದೊಡ್ಡ ಆಸ್ತಿಯಾಗಬೇಕು ಎಂದರು.

ಇದೇ ವೇಳೆ ಕಾಲೇಜಿಗೆ ಬೇಕಾದ ಮರದ ಚೇರ್, ವಿದ್ಯಾರ್ಥಿಗಳ ಊಟದ ಬಟ್ಟಲು, ಸಮವಸ್ತ್ರ , ಐಡಿ ಕಾರ್ಡ್, ಟೆಸ್ಟ್ ಬುಕ್ ಇವುಗಳನ್ನು ಹಸ್ತಾಂತರಿಸಿದರು.
ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು.

ಮುಖ್ಯ ಅಭ್ಯಾಗತರಾಗಿ ಲಕ್ಷ್ಮಿ  ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ,ಕೋಟ ಪಂಚಾಯತ್ ಸದಸ್ಯರಾದ ಭುಜಂಗ ಗುರಿಕಾರ,ಎಂ.ಜಯರಾಮ ಶೆಟ್ಟಿ, ಪಡುಕರೆ ಶಾಲಾ ಪ್ರಾಥಮಿಕ  ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಹೊಳ್ಳ, ಪ್ರಾಥಮಿಕ ವಿಭಾಗದ ಎಸ್ ಡಿ ಎಂಸಿ ಅಧ್ಯಕ್ಷ ನಾಗರಾಜ್, ಪ್ರೌಢಶಾಲಾ ವಿಭಾಗದ ಅಧ್ಯಕ್ಷ ರಾಘವೇಂದ್ರ ಕಾಂಚನ್, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಚಂದ್ರ ಪುತ್ರನ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿ ಶರಣಮೂರ್ತಿ ನಿರೂಪಿಸಿ ವಂದಿಸಿದರು.ಕಾಲೇಜಿನ ಸರ್ವೋತೊಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗೀತಾನಂದ ಪ್ರವರ್ತಕ ಆನಂದ್ ಸಿ ಕುಂದರ್ ರವರಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು. ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ಸಹಕರಿಸಿದರು.

ಕೋಟದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗೀತಾನಂದ ಫೌಂಡೇಶನ್ ಕೊಡಮಾಡಿದ  ವಿವಿಧ ಕೊಡುಗೆಗಳನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹಸ್ತಾಂತರಿಸಿದರು.ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಿ, ಲಕ್ಷ್ಮಿ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ,ಕೋಟ ಪಂಚಾಯತ್ ಸದಸ್ಯರಾದ ಭುಜಂಗ ಗುರಿಕಾರ ಇದ್ದರು

Leave a Reply

Your email address will not be published. Required fields are marked *