
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ ಸಹಕಾರದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಜುಲೈ 1ರಂದು ಮಲಬಾರ್ ಗೋಲ್ಡ್ ಡೈಮಂಡ್ ನಲ್ಲಿ ನಡೆಯಲಿರುವ ವೈದ್ಯರ ದಿನ, ಲೆಕ್ಕಪರಿಶೋಧಕರ, ದಿನ ಹಾಗೂ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸಾಧಕರಿಗೆ ನೀಡಲಾಗುವ ಗೌರವ ಪುರಸ್ಕಾರ 2025 ಕ್ಕೆ ಹಿರಿಯ ವೈದ್ಯರಾಗಿರುವ ಡಾ. ಅಶೋಕ್ ಕುಮಾರ್ ವೈ .ಜಿ, ಸ್ತ್ರೀರೋಗ ತಜ್ಞೆ ಡಾ, ಛಾಯಾಲತಾ ಅದೇ ರೀತಿ ಹಿರಿಯ ಲೆಕ್ಕ ಪರಿಶೋಧಕರಾಗಿರುವ, ಪಿ ಚಂದ್ರಮೋಹನ್ ಹಂದೆ, ಕೆ.ಸುರೇಂದ್ರ ನಾಯಕ್ ಹಾಗೂ ಪತ್ರಕರ್ತರಾದ ಸುಭಾಷ್ಚಂದ್ರ ವಾಗ್ಲೆ ಮತ್ತು ನಜೀರ್ ಪೊಲ್ಯ ಆಯ್ಕೆಯಾಗಿದ್ದಾರೆ ಎಂದು ಗೌರವ ಪುರಸ್ಕಾರ ಸಮಿತಿಯ ಸಂಚಾಲಕರಾದ ವಿಘ್ನೇಶ್ವರ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Reply