
ಕೋಟ: ಮಳೆಗಾಲ ಬಂತೆAದರೆ ವಿವಿಧ ಬಗೆಯ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಿಗಂತೂ ಇದರ ಹಾನಿ ಅಪಾರ. ಮಳೆಗಾಲದ ಎಚ್ಚರಿಜೆಯೊಂದಿಗೆ ಕಾಯಿಲೆಗಳ ಸ್ವರೂಪ ತಿಳಿದುಕೊಳ್ಳುವುದು ಮತ್ತು ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ತೀರಾ ಅಗತ್ಯವೆಂದು ಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ. ಮಾಧವ ಪೈ ನುಡಿದರು.
ಅವರು ಇತ್ತೀಚಿಗೆ ಕೋಟದ ವಿವೇಕ ಬಾಲಕಿಯರ ಪ್ರೌಢ ಶಾಲೆಯ ಆರೋಗ್ಯ ಸಂಘದ ಆಶ್ರಯದಲ್ಲಿ ನಡೆದ ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮುಖ್ಯೋಪಾಧ್ಯಾಯರಾದ ವೆಂಕಟೇಶ ಉಡುಪರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಆರೋಗ್ಯ ಸಂಘದ ಸಂಚಾಲಕರಾದ ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ,ಕೋಟ ಆರೋಗ್ಯ ಕೇಂದ್ರದ ಹರೀಶ್ಚಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಾನ್ವಿ ನಿರೂಪಿಸಿದ ಕಾರ್ಯಕ್ರಮಕ್ಕೆ ಆರೋಗ್ಯ ಸಂಘದ ಕಾರ್ಯದರ್ಶಿಯಾದ ವಿದ್ಯಾರ್ಥಿನಿ ರಕ್ಷಾ ವಂದಿಸಿದರು.
ಇತ್ತೀಚಿಗೆ ಕೋಟದ ವಿವೇಕ ಬಾಲಕಿಯರ ಪ್ರೌಢ ಶಾಲೆಯ ಆರೋಗ್ಯ ಸಂಘದ ಆಶ್ರಯದಲ್ಲಿ ನಡೆದ ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ. ಮಾಧವ ಪೈ ಮಾತನಾಡಿದರು. ಮುಖ್ಯೋಪಾಧ್ಯಾಯರಾದ ವೆಂಕಟೇಶ ಉಡುಪ, ಆರೋಗ್ಯ ಸಂಘದ ಸಂಚಾಲಕರಾದ ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಉಪಸ್ಥಿತರಿದ್ದರು.
Leave a Reply