Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸಿಎ ಬ್ಯಾಂಕ್ ಚುನಾವಣೆಯ ಮರು ಎಣಿಕೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮರು ಮತ ಎಣಿಕೆಯಲ್ಲಿ 8 ಮತಗಳ ಅಂತರದಿoದ ಭರ್ಜರಿ ಗೆಲುವು

ಕೋಟ: ಇತ್ತೀಚಿಗೆ ನಡೆದ ಕೋಟ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸಹಕಾರಿ ಮಿತ್ರರು ತಂಡ ಮಹಿಳಾ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ ಪ್ರೇಮಗಣೇಶ್ ಅವರು ಕೇವಲ ಒಂದು ಮತದಿಂದ ಸೋಲನ್ನಪ್ಪಿದ್ದರು. ಸೋತ ಅಭ್ಯರ್ಥಿ ಮರು ಎಣಿಕೆಗೆ ಕುಂದಾಪುರ ಎ.ಆರ್ ಕೋರ್ಟ್ನಲ್ಲಿ ದಾವೆ ದಾಖಲಿಸಿದ್ದರು.

ಅದರಂತೆ 6 ತಿಂಗಳ ಸುದೀರ್ಘ ವಿಚಾರಣೆ ಬಳಿಕ ಉಚ್ಚ ನ್ಯಾಯಾಲಯ ಮರುಎಣಿಕೆ ಆದೇಶ ನೀಡಿ ಜೂ. 29 ರಂದು ಕೋಟದ ವಿವೇಕ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಬೆಳಿಗ್ಗೆ ಮರು ಮತ ಎಣಿಕೆ ನಡೆಯಿತು.

ಅದರಲ್ಲಿ ಪ್ರತಿ ಸ್ಪರ್ಧಿ ಬೆಜೆಪಿ ಬೆಂಬಲಿತ ಅಭ್ಯರ್ಥಿ ಉಮಾ ಗಾಣಿಗ 2897 ಮತ ಗಳಿಸಿದ್ದು ಇವರ ವಿರುದ್ಧ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರೇಮಗಣೇಶ್ 2905 ಮತಗಳನ್ನು ಗಳಿಸಿ 8 ಮತಗಳ ಅಂತರ ದಿಂದ ಜಯ ಗಳಿಸಿದ್ದಾರೆ.
ಜಯಗಳಿದ ಅಭ್ಯರ್ಥಿ ಪ್ರೇಮ ಗಣೇಶ್ ಅವರಿಗೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಹಾಗೂ ಸಹಕಾರಿ ಮಿತ್ರ ತಂಡ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.

ಇತ್ತೀಚಿಗೆ ನಡೆದ ಕೋಟ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸಹಕಾರಿ ಮಿತ್ರರು ತಂಡ ಮಹಿಳಾ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ ಪ್ರೇಮಗಣೇಶ್ ಮರು ಮತ ಏಣಿಕೆಯಲ್ಲಿ ಜಯಗಳಿಸಿದರು.

Leave a Reply

Your email address will not be published. Required fields are marked *