
ನೂತನ ಆಡಳಿತ ಸಮಿತಿ ಸದಸ್ಯತನದ ಚುನಾವಣಾ ಅರ್ಜಿ ಆಹ್ವಾನ
ಮುಂಬಯಿ: ಜು. 11 – ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ) ಇದರ ವಿಶೇಷ ಮಹಾಸಭೆಯು ಸಂಘದ ಅಧ್ಯಕ್ಷ ರಾಜು ಮೆಂಡನ್ ವಂಡ್ರೆ ಇವರ ಅಧ್ಯಕ್ಷತೆಯಲ್ಲಿ ಜು.26 ರ ಶನಿವಾರ ಮಧ್ಯಾಹ್ನ 3.30 ಕ್ಕೆ ವಾಜು ಕೊಟಕ್ ಮಾರ್ಗ, ಕಾಂಟ್ರಾಕ್ಟರ್ ಬಿಲ್ಡಿಂಗ್, ಮೊದಲ ಮಹಡಿ, ರೂ ನಂಬ್ರ 16 ರಲ್ಲಿನ ಸಂಘದ ಕಚೇರಿಯಲ್ಲಿ ಜರಗಲಿದೆ .
ಈ ಸಂದರ್ಭದಲ್ಲಿ 2025 ರಿಂದ 27ನೇ ಸಾಲಿನ ಸಂಘದ ಆಡಳಿತ ಸಮಿತಿಯ ಸದಸ್ಯತನಕ್ಕಾಗಿ ಚುನಾವಣೆಯು ಜರಗಲಿದ್ದು, ಆಡಳಿತ ಸಮಿತಿಗೆ ಉಮೇದ್ಯಾರ- ರಾಗಲಿಚ್ಚಿಸುವ ಸದಸ್ಯ ಬಾಂಧವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ .
ಅಂದು ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ಚುಣಾವಣೆಯು ಜರಗಲಿದ್ದು, ಸದಸ್ಯ ಬಾಂಧವರು ತಮ್ಮ ಹೆಸರು ಮುದ್ರಿಸಿರುವ ಐಡಿ ಕಾರ್ಡ್ ಅಥವಾ ನಾಮ ಪತ್ರಿಕೆಯ ಪ್ರತಿಯನ್ನು ತರುವಂತೆ ಆಡಳಿತ ಸಮಿತಿಯ ಆದೇಶದ ಮೇರೆಗೆ ಗೌ. ಪ್ರ. ಕಾರ್ಯದರ್ಶಿ ಗಣೇಶ್ ಮೆಂಡನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿರುವರು.
Leave a Reply