
ಉಡುಪಿ : ಸಾಮಾಜಿಕ ಹೋರಾಟಗಾರ ಮತ್ತು ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ಬಾರ್ಕೂರು ಅವರು ಬುಧವಾರ (ಜು.23) ನಿಧನ ಹೊಂದಿದರು. ಬ್ರಹ್ಮಾವರ ತಾಲೂಕು ರಚನೆಗೆ ಸತತ ಹೋರಾಟ ನಡೆಸಿದ್ದ ಸತೀಶ್ ಪೂಜಾರಿ ಅವರು, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು.
ಹನೆಹಳ್ಳಿ ಸಮೀಪದ ಮೂಡುಕೆರೆ ಮೂಲದವರಾದ ಸತೀಶ್ ಪೂಜಾರಿ ಅವರು 1993-95ರ ಅವಧಿಯಲ್ಲಿ ಬ್ರಹ್ಮಾವರದ ಸೇಂಟ್ ಮೆರಿಸ್ ಸಿರಿಯನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಹನೆಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಕೆಲಸ ಮಾಡಿದ್ದ ಸತೀಶ್ ಪೂಜಾರಿ ಅವರು, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
Leave a Reply