
ಕೋಟ: ಇಲ್ಲಿನ ಕೋಡಿ ಪಂಚಾಯತ್ ವ್ಯಾಪ್ತಿಯ ಹೊಸಬೆಂಗ್ರೆ ಅಂಗನವಾಡಿಯಲ್ಲಿ ಕೋಡಿ ಗ್ರಾಮ ಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಹಾಗೂ ಆರೋಗ್ಯ ಇಲಾಖೆ ಕೋಡಿಬೆಂಗ್ರೆ ಜಂಟಿಯೊoದಿಗೆ ಸ್ಥನ್ಯ ಪಾನ ಸಪ್ತಾಹ ಮತ್ತು ಬಾಲ್ಯ ವಿವಾಹ ನಿಷೇಧ ಹಾಗೂ ಮಹಿಳಾ ದೌರ್ಜನ್ಯ ನಿಷೇಧ ತರಬೇತಿ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಪುಟಾಣಿ ಹಾಗೂ ಪೋಷಕರ ಮೂಲಕ ಅಂಗನವಾಡಿಯಲ್ಲಿ ಒಂದು ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು.
ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೋಡಿ ಆರೋಗ್ಯ ಇಲಾಖೆ ಪಿಎಚ್‌ಸಿಒ ಅಮೀತ ಸ್ಥನ್ಯಪಾನದ ಬಗ್ಗೆ ಡೆಮೋ ಮೂಲಕ ಮಾಹಿತಿ ನೀಡಿದರು.
ಜಿಲ್ಲಾ ಸಂಯೋಜಕಿ ಶಾರದ ಬಾಲ್ಯ ವಿವಾಹ ನಿಷೇಧ ಮತ್ತು ಮಹಿಳಾ ದೌರ್ಜನ್ಯದ ಬಗ್ಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಬಾಲಾವಿಕಾಸ ಸಮಿತಿ ಅಧ್ಯಕ್ಷೆ ಸುಲೋಚನಾ, ಸಿಎಚ್‌ಒ ಪರಸಪ್ಪ, ಪೋಷಕರು ಹಾಗೂ ಸ್ತಿçಶಕ್ತಿ ಸಂಘದವರು, ಮುದ್ದು ಪುಟಾಣಿಗಳು ಉಪಸ್ಥಿರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಪ್ರಸ್ತಾವನೆ ಸಲ್ಲಿಸಿದರು. ಅಂಗನವಾಡಿ ಶಿಕ್ಷಕಿ ಯಮುನಾ ಎಲ್ ಕುಂದರ್ ಸ್ವಾಗತಿಸಿ ನಿರೂಪಣೆಗೈದರು. ಆಶಾ ಕಾರ್ಯಕರ್ತೆ ಜ್ಯೋತಿ ವಂದಿಸಿದರು.
ಕೋಡಿ ಪಂಚಾಯತ್ ವ್ಯಾಪ್ತಿಯ ಹೊಸಬೆಂಗ್ರೆ ಅಂಗನವಾಡಿಯಲ್ಲಿ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಸಾಮಾಜಿಕ ಕಾರ್ಯಕ್ರಮವನ್ನು ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಡಿ ಆರೋಗ್ಯ ಇಲಾಖೆ ಪಿಎಚ್‌ಸಿಒ ಅಮೀತ, ಜಿಲ್ಲಾ ಸಂಯೋಜಕಿ ಶಾರದ, ಬಾಲಾವಿಕಾಸ ಸಮಿತಿ ಅಧ್ಯಕ್ಷೆ ಸುಲೋಚನಾ ಇದ್ದರು.
Leave a Reply