
ಕೋಟ: ಇಲ್ಲಿನ ರೋಟರಿ ಕ್ಲಬ್ ಸಾಸ್ತಾನ ಹಂಗಾರಕಟ್ಟೆ ವತಿಯಿಂದ ಸೋಮವಾರ ವಾರದ ಸಭೆ ಅಂಗವಾಗಿ ಆಷಾಡ ಸಂಭ್ರಮ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮವನ್ನು ಚೆನ್ನೆ ಮಣೆ ಆಟ ಆಡುವುದರಿಂದ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ವೈದ್ಯರಾದ ಡಾ. ವಾಣಿಶ್ರೀ ಐತಾಳ್ ಆಟಿಯಾ ತಿಂಗಳ ಅಹಾರ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸಾಸ್ತಾನ ಹಂಗಾರಕಟ್ಟೆ ಅಧ್ಯಕ್ಷರಾದ ಜ್ಯೋತಿ ಉದಯಕುಮಾರ್, ಕಾರ್ಯದರ್ಶಿಗಳಾದ ಮುರುಳೀಧರ್ ನಾಯರಿ ಝೋನಲ್ ಲೆಫ್ಟಿನೆಂಟ್ ಸುಲತಾ ಹೆಗ್ಡೆ ಹಾಗೂ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.
ರೋಟರಿ ಕ್ಲಬ್ ಸಾಸ್ತಾನ ಹಂಗಾರಕಟ್ಟೆ ವತಿಯಿಂದ ಆಷಾಡ ಸಂಭ್ರಮ ಕಾರ್ಯಕ್ರಮ
ಜರಗಿತು. ವೈದ್ಯರಾದ ಡಾ. ವಾಣಿಶ್ರೀ ಐತಾಳ್, ರೋಟರಿ ಕ್ಲಬ್ ಸಾಸ್ತಾನ ಹಂಗಾರಕಟ್ಟೆ ಅಧ್ಯಕ್ಷರಾದ ಜ್ಯೋತಿ ಉದಯಕುಮಾರ್, ಕಾರ್ಯದರ್ಶಿಗಳಾದ ಮುರುಳೀಧರ್ ನಾಯರಿ ಇದ್ದರು.
Leave a Reply