
ಕೋಟ: ಕ್ರೀಡಾ ವಿಭಾಗದಲ್ಲಿ ನಿರಂತರ ಸಾಧನೆ ಸಾಧಿಸುತ್ತಿರುವ ಈಜು ಪಟು ಕೋಟತಟ್ಟು ಮಾಷ್ಟರ್ ದಿಗಂತ್ ಈಜು ಸ್ಪರ್ಧೆಯಲ್ಲಿ ಸತತ ನಾಲ್ಕನೇ ಬಾರಿ ಜಿಲ್ಲಾ ಮಟ್ಟಕ್ಜೆ ಆಯ್ಕೆಯಾಗಿದ್ದಾರೆ.
ಇಲ್ಲಿನ ಸಂಯುಕ್ತ ಸರಕಾರಿ ಪ್ರೌಢ ಶಾಲಾ ವಿಭಾಗ ಮಣೂರು ಪಡುಕರೆ ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಹಿಂದೆ ಮೂರು ವರ್ಷದಿಂದ ಐವತ್ತು ಮೀಟರ್ ಫ್ರೀಸ್ಟೈಲ್ ಹಾಗೂ ನೂರು ಮೀಟರ್ ಬ್ರೆಸ್ಟ್ ಸ್ಟ್ರೋಕ್ ಎರಡು ವಿಭಾಗದಲ್ಲಿ ನಿರಂತರ ಜಿಲ್ಲಾ ಮಟ್ಟದಿಂದ ಆಯ್ಕೆಗೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಆ.08 ರಂದು ಮಣಿಪಾಲದಲ್ಲಿ ನಡೆಯಲಿರುವ 2025-26ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ನಾಲ್ಕನೇ ಬಾರಿ ಸ್ಪರ್ಧಿಸುತ್ತಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದಿಸಿದ್ದಾರೆ.
Leave a Reply