Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಾಳ್ಕುದ್ರು : 50 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಸರ್ವೋದಯ ಯುವಕ ಮಂಡಲ ಹಾಗೂ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಚೌತಿ ಗಮ್ಮತ್ 2025

ಬಾಳ್ಕುದ್ರು :  50 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮದ ಪ್ರಯುಕ್ತ ಸರ್ವೋದಯ ಯುವಕ ಮಂಡಲ ಹಾಗೂ ಮಹಿಳಾ ಮಂಡಳದ ಜಂಟಿ ಆಶ್ರಯದಲ್ಲಿ ಚೌತಿ ಗಮ್ಮತ್ 2025 ಸ.ಹಿ.ಪ್ರಾ.ಶಾಲೆ. ಬಾಳ್ಕುದ್ರುವಿನ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಚೌತಿ ಗಮ್ಮತ್ ಕ್ರೀಡಾಕೂಟವನ್ನು ದೀಪವನ್ನು ಪ್ರಜ್ವಲಿಸುವ ಮೂಲಕ ಶಾಲೆಯ ನೀವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲಾ ಇವರು ಉದ್ಘಾಟಿಸಿ ಮಾತನಾಡಿದರು.  ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಮತಿ ಶಶಿಕಲಾ ಹಾಗೂ ಶ್ರೀಮತಿ ದೇವಕಿ ರಂಗ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು. ನಂತರ ಶಾಲೆಯ ಮೈದಾನದಲ್ಲಿ ವಿಕೇಟ್ ಗೆ ಗುರಿ ಇಡುವ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲಾ ಹಾಗೂ ದೇವಕಿ ರಂಗ ಮಾಸ್ಟರ್ , ಐರೋಡಿ ಗ್ರಾಮಪಂಚಾಯತ್ ನ ಸದಸ್ಯರಾದ ಶ್ರೀಯುತ ಸುಬ್ರಹ್ಮಣ್ಯ ಆಚಾರ್ಯ, ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀಯುತ ವಿಜಯ್ ಪೂಜಾರಿ, 50 ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಯುತ ನಾಗರಾಜ ದೇವಾಡಿಗ , ಸರ್ವೋದಯ ಯುವಕ ಮಂಡಲದ ಅಧ್ಯಕ್ಷರಾದ ಶ್ರೀಯುತ ವಿಜೇತ ದೇವಾಡಿಗ ಹಾಗೂ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಖಾ ಪಿ ಸುವರ್ಣ ಹಾಗೂ ಉಭಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಚೌತಿ ಗಮ್ಮತ್ ಕಾರ್ಯಕ್ರಮದ ನಿರೂಪಣೆಯನ್ನು ನಮ್ಮ ಆತ್ಮೀಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಯುತ ಶ್ರೀ ಕಾಂತ್ ಸಾಮಂತ್ ಅವರು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *