
ಕೋಟ: ಆಗಿನ ಕಾಲಘಟ್ಟದ ಆಷಾಢ ದಿನಗಳನ್ನು ನೆನಪಿನಬುತ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ ಆ ದಿನಗಳು ಅಷ್ಟು ಮಹತ್ವ ಪಡೆದುಕೊಂಡಿತ್ತು ಎಂದು ನಿವೃತ್ತ ಪ್ರಾಂಶುಪಾಲ ಸಿ. ಸುರೇಶ್ ತುಂಗ ಅಭಿಪ್ರಾಯಪಟ್ಟರು.
ಸೋಮವಾರ ವನೀತಾ ಎಂ.ಉಪಾಧ್ಯಾಯ ಮನೆಯ ವಠಾರದಲ್ಲಿ ವಿಪ್ರ ಮಹಿಳಾ ಸಾಲಿಗ್ರಾಮ ವಲಯದ ವತಿಯಿಂದ ಆಷಾಢ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಗಿನ ದಿನಚರಿಗಳು ಆಹಾರ ಕ್ರಮಗಳು,ಅತಿ ಹೆಚ್ಚಿನ ಮಳೆಯ ವಾತಾವರಣ ನಮ್ಮಗೆ ವಿಶೇಷವಾಗಿ ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟಿದೆ, ಅದು ಕಳೆದು ಶ್ರಾವಣ ಮಾಸ ಮತ್ತುಷ್ಟು ಹೊಸ ದಿನಗಳಿಗೆ ಮುನ್ನುಡಿ ಬರೆಯುವಂತೆ ಮಾಡಿತ್ತು. ಅಂತಹ ದಿನಗಳನ್ನು ಇಂದಿನ ಯುವ ಸಮುದಾಯ ಅನುಭವಿಸಲು ಸಾಧ್ಯವೇ ಇಲ್ಲ ಇಂದು ಮೊಬೈಲ್ ಜಗತ್ತಿನಲ್ಲಿ ನಮ್ಮ ಜೀವನದ ಅತಿ ಅಮೂಲ್ಯ ಕ್ಷಣಗಳನ್ನು ಹಾಳುಗೆಡುವುತ್ತಿದ್ದೇವೆ ಎಂದರು.
ಆಷಾಢ ಮಾಸದ ಮಹತ್ವವನ್ನು ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಬಗೆಯ ಆರೋಗ್ಯ ಪೂರ್ಣ ತಿಂಡಿ ತಿನಿಸುಗಳನ್ನು ಇರಿಸಿ ಅನಾವರಣಗೊಳಿಸಿ ಉಪಸ್ಥಿತರಿಗೆ ಬಡಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಿಪ್ರ ಮಹಿಳಾ ವಲಯ ಅಧ್ಯಕ್ಷೆ ವನೀತಾ ಉಪಾಧ್ಯಾ ವಹಿಸಿ ಪ್ರಾಸ್ತಾವನೆ ಸಲ್ಲಿಸಿದರು. ವೇದಿಕೆಯಲ್ಲಿ ವಲಯ ಗೌರವಾಧ್ಯಕ್ಷೆ ಜ್ಞಾಹ್ನವಿ ಹೇರ್ಳೆ ಉಪಸ್ಥಿತರಿದ್ದರು.
ಇದೇ ವೇಳೆ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ಪತ್ರವನ್ನು ಸುಜಾತ ಬಾಯರಿ ವಾಚಿಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಸ್ಮಿತಾರಾಣಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ವಿಪ್ರ ಮಹಿಳಾ ಸಾಲಿಗ್ರಾಮ ವಲಯದ ವತಿಯಿಂದ ಆಷಾಢ ಪರ್ವ ಕಾರ್ಯಕ್ರಮವನ್ನು ಎಂದು ನಿವೃತ್ತ ಪ್ರಾಂಶುಪಾಲ ಸಿ. ಸುರೇಶ್ ತುಂಗ ಉದ್ಘಾಟಿಸಿದರು. ವಿಪ್ರ ಮಹಿಳಾ ವಲಯ ಅಧ್ಯಕ್ಷೆ ವನೀತಾ ಉಪಾಧ್ಯಾ, ವಲಯ ಗೌರವಾಧ್ಯಕ್ಷೆ ಜ್ಞಾಹ್ನವಿ ಹೇರ್ಳೆ ಉಪಸ್ಥಿತರಿದ್ದರು.
Leave a Reply