
ಕೋಟ: ಕೋಟ ಸೇವಾ ಸಂಗಮ ಶಿಶುಮಂದಿರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಧಾರ್ಮಿಕ ಚಿಂತಕ ಕೋಟ ಶ್ರೀ ಕಾಶಿಮಠ ಇದರ ಪ್ರಧಾನ ಅರ್ಚಕ ದೇವದತ್ತ ಭಟ್ ರಕ್ಷಾ ಬಂಧನದ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸಿದರು.
ವ್ಯವಸ್ಥಾಪಕಿ ಭಾಗ್ಯ ವಾದಿರಾಜ್ ಸ್ವಾಗತಿಸಿ, ಕಾರ್ಯದರ್ಶಿ ಸುಷ್ಮಾ ಹೊಳ್ಳ ನಿರೂಪಿಸಿ ಧನ್ಯವಾದ ಸಲ್ಲಿಸಿದರು. ಮಾತೆಯರು, ಶಿಶುಮಂದಿರ ಮತ್ತು ಬಾಲ ಗೋಕುಲದ ಮಕ್ಕಳು ಉಪಸ್ಥಿತರಿದ್ದರು. ಕೋಟ ಸೇವಾ ಸಂಗಮ ಶಿಶುಮಂದಿರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.
Leave a Reply