
ಹಂಗಾರಕಟ್ಟೆ : ಚಿಪ್ಪಿಕಟ್ಟೆ ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಚಿಪ್ಪಿಕಟ್ಟೆ ಅಂಗನವಾಡಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಮಹಿಳಾ ಮಂಡಳ ಹಂಗಾರಕಟ್ಟೆ ಇದರ ಅದ್ಯಕ್ಷೆಯಾದ ಶ್ರೀಮತಿ ರೇಖಾ ಪಿ ಸುವರ್ಣ ಇವರು ನೆರವೇರಿಸಿ ಪುಟಾಣಿ ಚಿತ್ತಾಲರಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಶಾಲೆಯ ಕಾರ್ಯಕರ್ತೆಯಾದ ಶ್ರೀಮತಿ ರತಿ ಮತ್ತು ಪ್ರೀತಿ , ಅತಿಥಿಯಾಗಿ ಇಂದಿರಾ ಮತ್ತು ಲಕ್ಮೀ ಪೂಜಾರ್ತಿ ಮತ್ತು ಮಹಿಳಾ ಮಂಡಲದ ಸರ್ವ ಸದಸ್ಯರು ಹಾಗು ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Reply