
ಸಾವಳಗಿ: ಮುರುಗೇಶ್ ನಿರಾಣಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಎಮ್. ಆರ್. ಎನ್. (ನಿರಾಣಿ) ಫೌಂಡೇಶನ್ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಂಡಿದ್ದಾರೆ.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಡಾ. ರಾವಳ ಅವರ ಎಸ್. ಕೆ. ಮಲ್ಟಿಸ್ಪೇಶಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ಆ 19 ರಂದು ಬೆಳಿಗ್ಗೆ 10 ರಿಂದ 2:30 ವರೆಗೆ, ಕೆ. ಎಲ್. ಇ ವಿಶ್ವವಿದ್ಯಾಲಯ, ಡಾ// ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಜೆ. ಎನ್. ಮೆಡಿಕಲ್ ಕಾಲೇಜು ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಶಿಬಿರ ನಡೆಯುತ್ತದೆ ಎಂದು ಗ್ರಾಮ ಪಂಚಾಯತ ಸದಸ್ಯ ರಾಜುಗೌಡ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Reply