
ಕೋಟ : ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ, ಅಂಗ ಸಂಸ್ಥೆ ಸಾಲಿಗ್ರಾಮ ಇವರಿಂದ ಇತ್ತೀಚೆಗೆ ಆಷಾಢದಲ್ಲಿ ನಮ್ಮ ಚಾವಡಿ ಎನ್ನುವ ವಿಶೇಷ ಕಾರ್ಯಕ್ರಮ ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದ ಕೂಟ ಬಂದು ಭವನದಲ್ಲಿ ನಡೆಯಿತು.
ಆಷಾಢ ಮಾತ್ರವಲ್ಲ ಇಡೀ ವರ್ಷ ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿರುವ ಹಬ್ಬ ಹರಿದಿನಗಳು ,ಆಚಾರ ವಿಚಾರಗಳು, ಯಾವುವು ಮೂಢನಂಬಿಕೆಗಳಲ್ಲ ಅವುಗಳಲ್ಲಿ ವೈಜ್ಞಾನಿಕ ಕಾರಣಗಳು ಇವೆ ಎನ್ನುವ ಅಂಶದೊoದಿಗೆ ವಿಶೇಶತೆಗಳನ್ನು ತಿಳಿದಿರುವ ಸಂಪನ್ಮೂಲ ವ್ಯಕ್ತಿಗಳಾದ ಶಾಂತ ಐತಾಳ ಕೋಟತಟ್ಟು, ರಮಾS.N, ಉಪಾಧ್ಯ ಗುಂಡ್ಮಿ , ಗಾಯತ್ರಿ ಹೊಳ್ಳ ಪಾಂಡೇಶ್ವರ, ಮೂಕಾಂಬಿಕಾ ಮಯ್ಯ ಹರ್ತಟ್ಟು ಇವರು ಸಂವಾದ ಕಾರ್ಯಕ್ರಮದ ಮೂಲಕ ನೆರವೇರಿಸಿ ಕೊಟ್ಟರು.
ನಂತರದಲ್ಲಿ ಆಷಾಢ ಸಂಭ್ರಮವನ್ನು ವಿಶೇಷ ತಿನಿಸುಗಳೊಂದಿಗೆ ಹಂಚಿಕೊಳ್ಳಲಾಯಿತು. ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ. ಸಿ. ಹೊಳ್ಳ ಸ್ವಾಗತಿಸಿ, ಕಾರ್ಯಕರ್ತರಾದ ಸಮ್ಮಂಗಲಿ ನಾವಡ ,ಲತಾ ಹೊಳ್ಳ ನಿರೂಪಿಸಿ , ಉಪಾಧ್ಯಕ್ಷೆ ವಿಜಯಲಕ್ಷ್ಮೀ ತುಂಗ ಧನ್ಯವಾದ ಹೇಳಿದರು.
ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ, ಅಂಗ ಸಂಸ್ಥೆ ಸಾಲಿಗ್ರಾಮ ಇವರಿಂದ ಇತ್ತೀಚೆಗೆ ಆಷಾಢದಲ್ಲಿ ನಮ್ಮ ಚಾವಡಿ ಎನ್ನುವ ವಿಶೇಷ ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಗಳಾದ ಶಾಂತ ಐತಾಳ ಕೋಟತಟ್ಟು, ರಮಾ .ಎಸ್.ಎನ್.ಉಪಾಧ್ಯ ಗುಂಡ್ಮಿ , ಗಾಯತ್ರಿ ಹೊಳ್ಳ ಪಾಂಡೇಶ್ವರ, ಮೂಕಾಂಬಿಕಾ ಮಯ್ಯ ಹರ್ತಟ್ಟು ಇವರುಗಳು ಸಂವಾದ ಮೂಲಕ ನೆರವೇರಿಸಿ ಕೊಟ್ಟರು.
Leave a Reply