
ಕೋಟ: ಕುಂದಾಪುರದ ವೆಂಕಟರಮಣ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಜೆಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಕೋಟದ ವಿವೇಕ ಬಾಲಿಕೆಯರ ಪ್ರೌಢಶಾಲೆಯ 10ನೇ ತರಗತಿಯ ಶ್ರಾವ್ಯ, ಸುರಭಿ , ಸಾಯಿಕ್ಷ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 9ನೇ ತರಗತಿಯ ಸೃಷ್ಠಿ 73 ಕೆ.ಜಿ ವಿಭಾಗದಲ್ಲಿ , 8ನೇ ತರಗತಿಯ ಅನನ್ಯ 39ಕೆ.ಜಿ ವಿಭಾಗದಲ್ಲಿ ಹಾಗೂ ಜನನಿ 46ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಯಾದಗಿರಿ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನದ ಜೊತೆಗೆ ತರಬೇತಿಯನ್ನು ಶಿಕ್ಷಕ ಗಣೇಶ ಶೆಟ್ಟಿ ಮತ್ತು ಮಮತಾರವರನ್ನು ಶಾಲೆಯ ಆಡಳಿತ ಮಂಡಳಿಯವರು , ಶಾಲಾ ಮುಖ್ಯಸ್ಥರು ಹಾಗೂ ಅಧ್ಯಾಪಕವೃಂದವರು ಅಭಿನಂದಿಸಿದ್ದಾರೆ.
Leave a Reply