
ವರದಿ ಸಚೀನ ಆರ್ ಜಾಧವ
ಸಾವಳಗಿ: ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ. ಆದರೆ ಅರೋಗ್ಯ ಕೈಕೊಟ್ಟಾಗ ದುಡಿದ ಹಣ ಒಯ್ದು ಸುರಿಯುತ್ತೇವೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತದಂತಹ ರೋಗಗಳು ಹೆಚ್ಚುತ್ತಿವೆ. ಆರೋಗ್ಯದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು’ ಎಂದು ಕೆ. ಎಲ್. ಇ ವಿಶ್ವವಿದ್ಯಾಲಯ, ಡಾ// ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಜೆ. ಎನ್. ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿ ಡಾ|| ಅಲ್ಲಮಪ್ರಭು ಕುಡಚಿ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ಡಾ. ರಾವಳ ಅವರ ಎಸ್. ಕೆ. ಮಲ್ಟಿಸ್ಪೇಶಲಿಟಿ ಆಸ್ಪತ್ರೆಯಲ್ಲಿ ಕೆ. ಎಲ್. ಇ ವಿಶ್ವವಿದ್ಯಾಲಯ, ಡಾ// ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಜೆ. ಎನ್. ಮೆಡಿಕಲ್ ಕಾಲೇಜು ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಕಾರ್ಯಕ್ರಮ ನಡೆಯಿತು.
ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚುಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗ್ಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ. ಎಲ್. ಈ ಆಸ್ಪತ್ರೆಯ ವೈದ್ಯರು, ಎಮ್. ಆರ್. ಎನ್. ಫೌಂಡೇಶನ್ ಡೈರೆಕ್ಟರ್ ಗಿರೀಶ ಆನಿಕಿಂದಿ, ಆಯ್. ಜಿ. ನ್ಯಾಮಗೌಡ, ಗ್ರಾಮ ಪಂಚಾಯತ ಅಧ್ಯಕ್ಷ ಸಂಜೀವ ಮಾಳಿ, ರಾಜಶೇಖರಯ್ಯ ಹಿರೇಮಠ, ಸುರೇಶ ಮಾಳಿ ರಾವಳ ಆಸ್ಪತ್ರೆ ಡಾ|| ಎನ್. ಕೆ. ರಾವಳ, ಡಾಕ್ಟರ್ ಭರತ ಶೇಗುನಸಿ, ಸೇರಿದಂತೆ ಗ್ರಾಮದ ಎಲ್ಲಾ ಡಾಕ್ಟರಗಳು ಗ್ರಾಮ ಪಂಚಾಯತ ಸದಸ್ಯ ವಿನೋಭಾ ನ್ಯಾಮಗೌಡ, ಸಿದ್ದಾರ್ಥ್ ತಳಕೇರಿ, ಶಂಕರ್ ಐನಾಪುರ, ಸಿದ್ದು ಬಂಡಿವಡ್ಡರ, ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಊರಿನ ಹಿರಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ, ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ.
ರಾಜುಗೌಡ ಪಾಟೀಲ
ಗ್ರಾಮ ಪಂಚಾಯತ ಸದಸ್ಯ ಸಾವಳಗಿ.
Leave a Reply