Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ: ಮುಳೂರಿನಲ್ಲಿ ಅಪಘಾತ; ಡಿಜೆ ಮರ್ವಿನ್ ಮೃತ್ಯು..

ಕಾಪು : ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತವಾಗಿದ್ದು ಖ್ಯಾತ ಡಿಜೆ ಮರ್ವಿನ್ ಸಾವನ್ನಪ್ಪಿದ್ದು ಮತ್ತಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.

ಕಾಪು ತಾಲೂಕಿನ ಮೂಳೂರು ಎಂಬಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಪ್ರಜ್ವಲ್ ಮತ್ತು ಪ್ರಸಾದ್ ಗಾಯಗೊಂಡವರು. ಗಾಯಾಳು ಗಳನ್ನು ಉಡುಪಿ ಆಸ್ಪತ್ರೆಗೆ ಉಚ್ಚಿಲ ಆ್ಯಂಬುಲೆನ್ಸ್ ನ ಜಲಾಲುದ್ದೀನ್, ಹಮೀದ್, ಕೆ ಎಂ ಸಿರಾಜ್ ಮತ್ತು ಅನ್ವರ್‌ ಕೋಟೇಶ್ವರ ಸಾಗಿಸಿದರು. ಉಡುಪಿ, ಮಂಗಳೂರಿನ ಪ್ರಸಿದ್ದ ಡಿ ಜೆಯಾಗಿದ್ದ ಮರ್ವಿನ್ ಮೆಂಡೋನ್ಸಾ,ಹಲವಾರು ಕೊಂಕಣಿ ಮ್ಯೂಸಿಕ್ ವಿಡಿಯೋಗಳನ್ನು ಕೂಡಾ ನಿರ್ದೇಶನ ಮಾಡಿದ್ದರು. ನಿನ್ನೆಯಷ್ಟೇ ಅವರ ಹೊಸ ಕೊಂಕಣಿ ಮ್ಯೂಸಿಕ್ ವಿಡಿಯೋ ಬಿಡುಗಡೆ ಆಗಿತ್ತು.*

Leave a Reply

Your email address will not be published. Required fields are marked *