
ಕೋಟ: ಪ್ರತಿಭೆ ಅನಾವರಣಗೊಳ್ಳಬೇಕಾದರೆ ಅವರು ಅನುಸರಿಸುವ ಮಾರ್ಗ ಸಮರ್ಪಕವಾಗಿರಬೇಕು ಈ ದಿಸೆಯಲ್ಲಿ ನಮ್ಮ ಪ್ರತಿ ಕಾರ್ಯಕ್ಕೆ ದೇವರ ದಯೆ ಕರುಣಿಸುತ್ತಾನೆ ಇದಕ್ಕೆ ಪುರಕವಾಗಿ ಸುಶ್ಮಿತಾ ಬಹುಮುಖ ಪ್ರತಿಭೆಯಾಗಿ ಮೂಡಿಬರಲು ಸಾಧ್ಯವಾಗಿದೆ ಎಂದು ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಅನುವಂಶಿಕ ಆಡಳಿತ ಮುಕ್ತೇಸರ ಶ್ರೀರಮಣ ಉಪಾಧ್ಯಾ ಹೇಳಿದರು.
ಮಂಗಳವಾರ ಆನೆಗುಡ್ಡೆ ಶ್ರೀವಿನಾಯಕ ದೇಗುಲದಲ್ಲಿ ಕಲಾವಿಸ್ಮಯ ಕಲಾತಂಡದ ಸಂಸ್ಥಾಪಕಿ, ಡಾ। ಶಿವರಾಮ ಕಾರಂತ ಸಾಧನ ಸ್ತ್ರೀ ಪುರಸ್ಕೃತೆ ಸುಶ್ಮಿತಾ ಸಾಲಿಗ್ರಾಮ ಇವರ ಸಾಹಿತ್ಯ ಹಾಗೂ ಸಂಯೋಜನೆಯಲ್ಲಿ, ಕೀರ್ತನ್ ಪೂಜಾರಿ ಅವರು ಹಾಡಿರುವ ಶರಣೆಂಬೆ ವಿನಾಯಕ ಕನ್ನಡ ಭಕ್ತಿಗೀತೆಯನ್ನು ಆ. 26 ರಂದು ಲೋಕಾಪರ್ಣೆಗೊಳಿಸಿ ಮಾತನಾಡಿದ ಅವರು ತನ್ನ ಕಾರ್ಯಕ್ಷೇತ್ರದಲ್ಲಿ ಶ್ರದ್ಧೆ ಇದ್ದರೆ ಪ್ರತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರಲ್ಲದೆ ಸುಶ್ಮಿತಾ ಬಹುಮುಖ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ಗೀತೆಯ ಸಾಹಿತ್ಯ ಮತ್ತು ಸಂಯೋಜನೆ ಸುಶ್ಮಿತಾ ಸಾಲಿಗ್ರಾಮ ಕಾರ್ಯಕ್ರಮ ಸಂಯೋಜಿಸಿದರು. ಇದೇ ವೇಳೆ ಸಮ್ಮುಖದಲ್ಲಿ ಕಲಾವಿಸ್ಮಯ ಯೂಟ್ಯೂಬ್ ಚಾನೆಲ್ ಮೂಲಕ ಭಕ್ತಿಗೀತೆಯನ್ನು ಅನಾವರಣಗೊಳಿಸಲಾಯಿತು. ಸುಶ್ಮಿತಾ ಇವರ ಪೋಷಕರಾದ ಕೃಷ್ಣಮೂರ್ತಿ ಮರಕಾಲ, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಜ್ಞಾನಭಾರತಿ ವಿದ್ಯಾಸಂಸ್ಥೆ ಕುಂದಾಪುರ ಇದರ ಪ್ರಾಂಶುಪಾಲ ರಾಘವೇಂದ್ರ ಗೋಪಾಡಿ, ಮುಖ್ಯಸ್ಥರು ಜ್ಞಾನಭಾರತಿ ಫ್ಯಾಷನ್ ಡಿಸೈನಿಂಗ್ ಮುಖ್ಯಸ್ಥರಾದ ಪದ್ಮಿನಿ, ಸ್ಥಳೀಯರಾದ ರಾಘವೇಂದ್ರ ಕಾಂಚನ್ , ಆಡಿಯೋಗೆ ಸಹಕಾರ ನೀಡಿದ ಪ್ರಶಾಂತ್ ಡಿಸೋಜಾ, ವಿನಾಯಕ ಅಡಿಗ, ಶನೋಲ್, ನಾಗರಾಜ್ ಭಟ್
ಕಾರ್ಯಕ್ರಮವನ್ನು ಪತ್ರಕರ್ತ ರವೀಂದ್ರ ಕೋಟ ನಿರೂಪಿಸಿದರು. ಗಾಯನ ರೆಕಾರ್ಡಿಂಗ್ ಮಿಕ್ಸಿಂಗ್ ಮಾಸ್ಟರಿಂಗ ಕೀರ್ತನ್ ಪೂಜಾರಿ, ಸಂಗೀತ ನಿರ್ವಹಣೆಯನ್ನು ಅಜೇಶ್ ಎಂ.ಸಿ. ಸಹಕರಿಸಿದರು.
Leave a Reply