
ಕೋಟ: ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ಅನ್ನಪೂರ್ಣ ನರ್ಸರಿ ಪೇತ್ರಿ, ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ,ಸಮುದ್ಯತಾ ಗ್ರೂಪ್ಸ್ ಕೋಟ, ಮಣೂರು ಫ್ರೆಂಡ್ಸ್,ಜೆಸಿಐ ಸಿನಿಯರ್ ಲಿಜನ್ ಕೋಟ ಇವರ ಸಹಯೋಗದೊಂದಿಗೆ ಮೂರು ತಿಂಗಳ ಹಸಿರುಜೀವ 269ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ ಕಾರ್ಯಕ್ರಮ ಹಸಿರುಜೀವ ಅಭಿಯಾನದಲ್ಲಿ ಕೋಟ,ಸಾಲಿಗ್ರಾಮ, ಗುಂಡ್ಮಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೆಟ್ಟ ಗಿಡಗಳಿಗೆ ಕಾಯಕಲ್ಪ ನೀಡುವ ಕಾರ್ಯಕ್ರಮ ಭಾನುವಾರ ಜರಗಿತು. ಕಾರ್ಯಕ್ರಮಕ್ಕೆ ನ್ಯಾಯವಾದಿ ರಾಜೇಶ್ ಬಾರಿಕೆರೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ,ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್,ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್ ಕೋಟ,ಪಂಚವರ್ಣದ ಉಪಾಧ್ಯಕ್ಷರಾದ ದಿನೇಶ್ ಆಚಾರ್,ಸಂತೋಷ್ ಪೂಜಾರಿ,ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್,ಗಿರೀಶ್ ಆಚಾರ್ ಮತ್ತಿತರರು ಇದ್ದರು.
ಕೋಟ,ಸಾಲಿಗ್ರಾಮ,ಗುಂಡ್ಮಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಟ್ಟ ಹಸಿರುಜೀವಕ್ಕೆ ಪಂಚವರ್ಣದಿoದ ಕಾಯಕಲ್ಪ ಕಾರ್ಯಕ್ರಮಕ್ಕೆ ನ್ಯಾಯವಾದಿ ರಾಜೇಶ್ ಬಾರಿಕೆರೆ ಚಾಲನೆ ನೀಡಿದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ,ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಇದ್ದರು.
Leave a Reply