
ಕೋಟ : ಸರಕಾರಿ ಪ್ರೌಢಶಾಲೆ ಕೋಟ ಮಣೂರು ಪಡುಕರೆ ಇಂರ‍್ಯಾಕ್ಟ್ ಕ್ಲಬ್ ಅಧ್ಯಕ್ಷೆ ಕುಮಾರಿ ಪೂರ್ವಿ, ಕಾರ್ಯದರ್ಶಿ ಕುಮಾರಿ ಶಮಿತಾ ಹಾಗೂ ಅವರ ತಂಡಕ್ಕೆ ರೋಟರಿ ಜಿಲ್ಲಾ ಇಂರ‍್ಯಾಕ್ಟ್ ಸಭಾಪತಿ ಸುರೇಶ್ ಬೇಳೂರು ಅವರು ಪದ ಪ್ರದಾನ ಮಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಲು ಹಾಗೂ ಅವರನ್ನು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವಲ್ಲಿ ಪ್ರೇರೇಪಣೆ ನೀಡುವಲ್ಲಿ ರೋಟರಿಯ ಅಂಗ ಸಂಸ್ಥೆಗಳಾದ ಇಂರ‍್ಯಾಕ್ಟ್ ಕ್ಲಬ್ ಹಾಗೂ ರೋರ‍್ಯಾಕ್ಟ್ ಕ್ಲಬ್ ಬಹಳ ಪ್ರಮುಖ ಪಾತ್ರ ವಹಿಸುತ್ತಿದ್ದು, ಇಂದಿನ ಇಂಟರ್ಯಾಕ್ಟ್ ಹಾಗೂ ರೋಟರ್ಯಾಕ್ಟ್ ಸದಸ್ಯರುಗಳೇ ಭವಿಷ್ಯದ ರೋಟರಿ ಸದಸ್ಯರಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಿರುವುದು ಬಹಳ ಸಂತಸದ ವಿಷಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಕೋಟ ಸಿಟಿಯ ಅಧ್ಯಕ್ಷರಾದ ಪ್ರಕಾಶ್ ಹಂದಟ್ಟು ಅಧ್ಯಕ್ಷತೆ ವಹಿಸಿದ್ದರು. ಇಂರ‍್ಯಾಕ್ಟ್ ವಲಯ ಸಂಚಾಲಕ ದಯಾನಂದ ಆಚಾರ್, ಡಾ. ಗಣೇಶ್, ಮುಖ್ಯೋಪಾಧ್ಯಾಯ ವಿವೇಕಾನಂದ ವಿ ಗಾಂವಕಾರ್, ಹಿರಿಯ ಸಹ ಶಿಕ್ಷಕರಾದ ರಾಮದಾಸ್ ನಾಯಕ್ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಪ್ರಾಸ್ತಾವಿಕ ಮಾತನಾಡಿದರು. ಸಹಶಿಕ್ಷಕರಾದ ರಾಜೀವ್ ಕಾರ್ಯಕ್ರಮ ನಿರೂಪಣೆ ಮಾಡಿದರು. ರೋಟರಿ ಕಾರ್ಯದರ್ಶಿ ಕೃಷ್ಣ ಪೂಜಾರಿ ಧನ್ಯವಾದ ಸಲ್ಲಿಸಿದರು.
ರೋಟರಿ ಕ್ಲಬ್ ಕೋಟ ಸಿಟಿ ಪ್ರಾಯೋಜಿತ ಸರಕಾರಿ ಪ್ರೌಢಶಾಲೆ ಮಣೂರು ಪಡುಕರೆ ಇಲ್ಲಿ ರೋಟರಿ ಜಿಲ್ಲಾ ಇಂರ‍್ಯಾಕ್ಟ್ ಸಭಾಪತಿ ಸುರೇಶ್ ಬೇಳೂರು ಇಂರ‍್ಯಾಕ್ಟ್ ಕ್ಲಬ್ ಪದ ಪ್ರದಾನ ನೆರವೆರಿಸಿದರು. ರೋಟರಿ ಕ್ಲಬ್ ಕೋಟ ಸಿಟಿಯ ಅಧ್ಯಕ್ಷರಾದ ಪ್ರಕಾಶ್ ಹಂದಟ್ಟು, ಇಂರ‍್ಯಾಕ್ಟ್ ವಲಯ ಸಂಚಾಲಕ ದಯಾನಂದ ಆಚಾರ್, ಡಾ. ಗಣೇಶ್, ಮುಖ್ಯೋಪಾಧ್ಯಾಯ ವಿವೇಕಾನಂದ ವಿ ಗಾಂವಕಾರ್, ಹಿರಿಯ ಸಹ ಶಿಕ್ಷಕರಾದ ರಾಮದಾಸ್ ನಾಯಕ್ ಉಪಸ್ಥಿತರಿದ್ದರು.
Leave a Reply