
ಕೋಟ: ಇತ್ತೀಚಿಗೆ ಮೀನುಗಾರಿಕೆಗೆ ತೆರಳಿದಾಗ ಆಕಸ್ಮಿಕವಾಗಿ ಅವಘಡ ಸಂಭವಿಸಿ ದೋಣಿ ದುರಂತದಲ್ಲಿ ಸಾವನ್ನಪ್ಪಿದ ಸಂಘಟಕ, ಕೋಡಿತಲೆ ಪಂಚಶಕ್ತಿ ಸಂಘದ ಕೋಶಾಧಿಕಾರಿ ಶರತ್ ಖಾರ್ವಿ ಯವರಿಗೆ ಕೋಡಿ ತಲೆಯಲ್ಲಿ ನುಡಿ ನಮನವನ್ನು ಇತ್ತೀಚಿಗೆ ಸಲ್ಲಿಸಲಾಯಿತು.
ಶರತ್ ಖಾರ್ವಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಮಾತನಾಡಿದ ಉಡುಪಿ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಸಹನಾಶೀಲ ಪೈಂ, ಯುವಜನತೆ ಈ ದೇಶದ ಸಂಪತ್ತು ಅದರಲ್ಲೂ ಮೀನುಗಾರರು ಪರೋಪಕಾರಿಗಳು ಹಾಗೂ ಶ್ರಮಜೀವಿಗಳು, ಮುಂಜಾನೆ ಎದ್ದು ಮೀನುಗಾರಿಕೆಗೆ ತೆರಳುವ ಅವರು ನಿಜವಾದ ಸಮಾಜ ಸೇವಕರು ಇನ್ನು ಮುಂದೆ ಮೀನುಗಾರಿಕೆಗೆ ಕಡ್ಡಾಯವಾಗಿ ಲೈಫ್ ಜಾಕೆಟ್ ಅನ್ನು ಬಳಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕೋಡಿ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಊರಿನ ಹಿರಿಯರಾದ ರತ್ನಾಕರ ಖಾರ್ವಿ, ಸುರೇಶ ಖಾರ್ವಿ,ಸಂಘದ ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ,ಉಪಾಧ್ಯಕ್ಷ ಪ್ರವೀಣ್ ಖಾರ್ವಿ ,ಕಾರ್ಯದರ್ಶಿ ಸಂದೀಪ ಖಾರ್ವಿ ಪದಾಧಿಕಾರಿಗಳಾದ ಅನಿಲ್, ಸಂದೀಪ ಬಿ.,ಸಂದೇಶ್, ದಿನೇಶ, ಪ್ರವೀಣ ಸಿ. ,ನಾಗರಾಜ. ವಿದೇಶ್, ಆನಂದ ಖಾರ್ವಿ , ಸಮಾಜ ಸೇವಕರಾದ ಮಣಿಕಂಠ ಖಾರ್ವಿ, ಕೊಂಕಣಿ ಖಾರ್ವಿ ಸಮಾಜದ ಪದಾಧಿಕಾರಿಗಳು , ಪಾದಯಾತ್ರಿಗಳು , ಊರಿನ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಇತ್ತೀಚಿಗೆ ಮೀನುಗಾರಿಕೆಗೆ ತೆರಳಿದಾಗ ಆಕಸ್ಮಿಕವಾಗಿ ಅವಘಡ ಸಂಭವಿಸಿ ದೋಣಿ ದುರಂತದಲ್ಲಿ ಸಾವನ್ನಪ್ಪಿದ ಸಂಘಟಕ, ಕೋಡಿತಲೆ ಪಂಚಶಕ್ತಿ ಸಂಘದ ಕೋಶಾಧಿಕಾರಿ ಶರತ್ ಖಾರ್ವಿ ಯವರಿಗೆ ನುಡಿ ನಮನವನ್ನು ಇತ್ತೀಚಿಗೆ ಸಲ್ಲಿಸಲಾಯಿತು. ಕೋಡಿ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಊರಿನ ಹಿರಿಯರಾದ ರತ್ನಾಕರ ಖಾರ್ವಿ, ಸುರೇಶ ಖಾರ್ವಿ,ಸಂಘದ ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ಇದ್ದರು.
Leave a Reply