
ಕೋಟ: ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಕೊಂಡ ಗಣೇಶೋತ್ಸವ ಈ ದೇಶದ ಐಕ್ಯತೆ ಸಂಕೇತವಾಗಿ ಧಾರ್ಮಿಕ ಪರಂಪರೆಯೊoದಿಗೆ ವಿಶ್ವಪ್ರಸಿದ್ಧಿಯಾಗಿದೆ ಎಂದು ಸಾಹಿತಿ ಎ.ಎಸ್ ಎನ್ ಹೆಬ್ಬಾರ್ ಹೇಳಿದರು.
ಕೋಟದ ಅಮೃತೇಶ್ವರೀ ದೇಗುಲದಲ್ಲಿ ಕೋಟದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಹಿರಿಯರು ಕಟ್ಟಿಕೊಟ್ಟು ಈ ಹಬ್ ಹರಿದಿನಗಳು ನಮ್ಮನ್ನು ಶ್ರೀಮಂತಗೊಳಿಸಿದೆ, ನಮ್ಮಲ್ಲಿರುವ ಸಾಂಸ್ಕöತಿಕ ಪರಂಪರೆ , ಭಗವದ್ಗೀತೆಯಂತಹ ಕೃತಿಗಳು ವಿಶ್ವಸಂದೇಶಕ್ಕೆ ಸಾಕ್ಷಿಯಾಗಿದೆ.ಭಾರತವನ್ನು ಬಗ್ಗು ಬಡಿಯುವ ತಂತ್ರ ಹುನ್ನಾರ ಎಸೆಗಿದ ಅಮೇರಿಕಾದಂತ ದೈತ್ಯ ದೇಶಗಳಿಗೆ ಗುದ್ದು ನೀಡುವ ಮಟ್ಟಕ್ಕೆ ಈ ಭಾರತ ಎದ್ದು ನಿಂತಿದೆ ಎಂದರು.
ಸಭೆಯಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಐವತ್ತು ಜನ ಸ್ಥಳೀಯ ಸಾಧಕರಿಗೆ ಸುವರ್ಣ ಸಂಭ್ರಮದ ಸನ್ಮಾನ ನೀಡಿ ಗೌರವಿಸಲಾಯಿತು. ಕೋಟ ದೊಡ್ಡ ಗಣೇಶನಿಗೆ ಬೆಳ್ಳಿ ,ಚಿನ್ನದ ಆಭರಣಗಳ ಪರಿಕರ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಸುವರ್ಣ ಸಂಭ್ರಮದ ಸಾರ್ಥಕ ಶ್ರಮಜೀವಿಗಳಿಗೆ ಅಭಿನಂದಿಸಲಾಯಿತು. ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ ಶುಭಾಶಂಸನೆಗೈದರು. ಇದೇ ವೇಳೆ ಗಣೇಶೋತ್ಸವದ ಅಂಗವಾಗಿ ನಡೆಸಿದ ಕ್ರೀಡಾಕೂಟದಲ್ಲಿ ವಿಜೇತರಾದ ಸಾಧಕರಿಗೆ ಬಹುಮಾನಗಳನ್ನು ಗಣ್ಯರ ಸಮ್ಮುಖದಲ್ಲಿ ನೀಡಲಾಯಿತು.
ಗಣೇಶೋತ್ಸವ ಪುರಮೆರವಣಿಗೆಯಲ್ಲಿ ಭಾಗಿಯಾಗುವ ಸದಸ್ಯರಿಗೆ ಟೀ ಶಟ್9ನ್ನು ಉದ್ಯಮಿಉಮೇಶ್ ರಾಜ್ ಕೊಡುಗೆಯಾಗಿ ನೀಡಿದ್ದು ಇದನ್ನು ಮಣೂರು ಮಹಾಲಿಂಗೇಶ್ವರ ದೇಗುದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಎಚ್ ಕುಂದರ್ ಬಿಡುಗಡೆಗೊಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಪ್ರಸಿದ್ಧ ಮನೋವೈದ್ಯ ಡಾ.ಪ್ರಕಾಶ್ ತೋಳಾರ್, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸುರೇಶ್ ಪ್ರಭು, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟಮಹಾಲಿoಗೇಶ್ವರ ದೇಗುಲದ ಅಧ್ಯಕ್ಷ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ್, ಸಮಿತಿಯ ಅಧ್ಯಕ್ಷ ರಮಾನಾಥ ಜೋಗಿ, ಉಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು. ರಾಜಾರಾಮ ಐತಾಳ್ ಸ್ವಾಗಸಿದರು.ಸಮಿತಿಯ ಕಾರ್ಯದರ್ಶಿ ಚಂದ್ರ ಆಚಾರ್ ನಿರೂಪಿಸಿ ವಂದಿಸಿದರು.
ಕೋಟದ ಅಮೃತೇಶ್ವರೀ ದೇಗುಲದಲ್ಲಿ ಕೋಟದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಶ್ರೀ ದೇವರಿಗೆ ಚಿನ್ನ , ಬೆಳ್ಳಿ ಆಭರಣಗಳನ್ನು ನೀಡಿದ ಮಹನೀಯರನ್ನು ಗೌರವಿಸಲಾಯಿತು.ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್,ಪ್ರಸಿದ್ಧ ಮನೋವೈದ್ಯ ಡಾ.ಪ್ರಕಾಶ್ ತೋಳಾರ್, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸುರೇಶ್ ಪ್ರಭು, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಇದ್ದರು.
Leave a Reply