
ಉಡುಪಿ,ಸೆ.7: ಹಿರಿಯ ಸಾಹಿತಿ, ಅಂಕಣ ಬರಹಗಾರ ಉಡುಪಿಯ ಹರಿಕೃಷ್ಣ ರಾವ್ ಸಗ್ರಿ (67ವ) ಅವರು, ಸೆ.7 ರವಿವಾರ ನಿಧನರಾದರು. ಮೃತರು ಪತ್ನಿ, ಪುತ್ರ, ಸೊಸೆಯನ್ನು ಅಗಲಿದ್ದಾರೆ.
ಸಾಹಿತ್ಯ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದ ಹರಿಕೃಷ್ಣರು, ಹಲವು ಧಾರ್ಮಿಕ ಗ್ರಂಥಗಳನ್ನು ಬರೆದಿದ್ದಾರೆ. ಗಣೇಶಪುರಿ ಅವಧೂತ ನಿತ್ಯಾನಂದ ಗುರುಗಳ ಅನನ್ಯ ಭಕ್ತರಾಗಿದ್ದರು. ನಿತ್ಯಾನಂದ ಸ್ವಾಮಿಗಳ ಚರಿತ್ರೆ ಪುಸ್ತಕವನ್ನು ಬರೆದಿದ್ದು, ನಿಯತಕಾಲಿಕ ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆಯುತ್ತಿದ್ದರು. ಇತರ ಸಾಹಿತಿಗಳ ಗ್ರಂಥಗಳಿಗೂ ಮುನ್ನುಡಿ, ಬೆನ್ನುಡಿ ಬರೆದಿದ್ದಾರೆ.
ಅಲ್ಲದೆ ಬರಹಗಾರರ ಮುದ್ರಣ ಹಂತದಲ್ಲಿರುವ ಗ್ರಂಥಗಳ ತಿದ್ದಿಪಡಿಸುವ, ಪ್ರೂಫ್ ರೀಡರ್ ಆಗಿಯು ಪ್ರಸಿದ್ಧರಾಗಿದ್ದರು. ಇವರು ಕನ್ನಡ ನುಡಿಗೆ ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು, ಮಠ ಮಂದಿರಗಳು ಸನ್ಮಾನಿಸಿ ಗೌರವಿಸಿವೆ. ಹರಿಕೃಷ್ಣರು ಉಡುಪಿಯ ಸಂಸ್ಕ್ರತ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
Leave a Reply