Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನ ಗೋಳಿಗರಡಿಯಲ್ಲಿ ನಾರಾಯಣ ಗುರು ಜಯಂತಿ, ಗಮನ ಸೆಳೆದ ಬ್ರಹ್ಮಶ್ರೀ ನಾರಾಯಣಗುರುಗಳ ರಂಗೋಲಿ ಚಿತ್ರ

ಕೋಟ: ಇಲ್ಲಿನ ಸಾಸ್ತಾದ ಗೋಳಿಗರಡಿ ದೈವಸ್ಥಾನದಲ್ಲಿ ಶ್ರೀ ಬ್ರಹ್ಮಬೈದರ್ಕಖ ಶ್ರೀ ಬಿಲ್ಲವ ಸೇವಾ ಸಂಘ ಸಾಸ್ತಾನ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ ಪೂಜಾರಿ ಸಾರಥ್ಯದಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮವನ್ನು ಗರಡಿ ಅರ್ಚಕರಾದ ದಿನಕರ ಪೂಜಾರಿ,ಶ್ರೀನಿವಾಸ ಪೂಜಾರಿ ನೆರವೆರಿಸಿದರು.

ಗಮನಸೆಳೆದ ಬೃಹತ್ ರಂಗೋಲಿ ನಾರಾಯಣಗುರುಗಳು
ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತೋತ್ಸವ ಅಂಗವಾಗಿ ಯುವ ಕಲಾವಿದೆ ಪ್ರಜ್ಞಾ ಜಿ.ಹಂದಟ್ಟು ಇವರ ಕೈಯಂಗಳದಿ ಮೂಡಿಬಂದ ಬೃಹತ್ ಬ್ರಹ್ಮ ಶ್ರೀನಾರಾಯಣ ಗುರುಗಳ ರಂಗೋಲಿ ಚಿತ್ರ ವಿಶೇಷವಾಗಿ ಗಮನ ಸೆಳೆಯಿತು.ಇದೇ ವೇಳೆ ಚಿತ್ರಕಲಾವಿದೆ ಪ್ರಜ್ಞಾ ಇವರನ್ನು ತಾಯಿ ಗೀತಾ ಪೂಜಾರಿ ಸಮ್ಮುಖದಲ್ಲಿ ಸಂಘದ ವತಿಯಿಂದ ಪ್ರಸಾದ ವಿತರಿಸಿ ಗೌರವಿಸಲಾಯಿತು.
ಸಂಘದ ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಕೋಶಾಧಿಕಾರಿ ವಿಜಯ ಪೂಜಾರಿ,ಗರಡಿಯ ಆಡಳಿತ ಮುಖ್ಯಸ್ಥರಾದ ಜಿ.ವಿಠ್ಠಲ್ ಪೂಜಾರಿ, ದೈವಸ್ಥಾನದ ಪಾತ್ರಿಗಳಾದ ಶಂಕರ ಪೂಜಾರಿ, ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಮಹಿಳಾ ಘಟಕದ ಅಧ್ಯಕ್ಷ ಲಿಲಾವತಿ ಗಂಗಾಧರ್, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಸಂಘದ ಪ್ರಮುಖರಾದ ಗಣೇಶ್ ಪೂಜಾರಿ, ಕರಿಯ ಪೂಜಾರಿ, ವನಜಾ , ಸುಧಾಕರ ಪೂಜಾರಿ ಐರೋಡಿ, ಸುರೇಶ್ ಸಂಬೋಡ್ಲು, ಕುಸುಮ, ಮನೋಜ್ ಕುಮಾರ್, ಅರ್ಚಕ ಹರೀಶ್, ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ, ಉಷಾ ಗಣೇಶ್, ಮತ್ತಿತರರು ಇದ್ದರು.

ಸಾಸ್ತಾದ ಗೋಳಿಗರಡಿ ದೈವಸ್ಥಾನದಲ್ಲಿ ಶ್ರೀ ಬ್ರಹ್ಮಬೈದರ್ಕಳ ಶ್ರೀ ಬಿಲ್ಲವ ಸೇವಾ ಸಂಘ ಸಾಸ್ತಾನ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತೋತ್ಸವ ಕಾರ್ಯಕ್ರಮ ಜರಗಿತು. ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ ಪೂಜಾರಿ, ಸಂಘದ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಕೋಶಾಧಿಕಾರಿ ವಿಜಯ ಪೂಜಾರಿ, ಗರಡಿಯ ಆಡಳಿತ ಮುಖ್ಯಸ್ಥರಾದ ಜಿ.ವಿಠ್ಠಲ್ ಪೂಜಾರಿ, ದೈವಸ್ಥಾನದ ಪಾತ್ರಿಗಳಾದ ಶಂಕರ ಪೂಜಾರಿ, ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಮಹಿಳಾ ಘಟಕದ ಅಧ್ಯಕ್ಷ ಲಿಲಾವತಿ ಗಂಗಾಧರ್ ಇದ್ದರು.

Leave a Reply

Your email address will not be published. Required fields are marked *