
ಕೋಟ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಡಹಡು ಪಾಂಡೇಶ್ವರ ಇವರ ವತಿಯಿಂದ ಅನಾರೋಗ್ಯಕ್ಕಿಡಾದ ಪಾಂಡೇಶ್ವರ ಕುಂಚಿಕೆರೆ ನಿವಾಸಿ ವಸಂತಿ ಪೂಜಾರಿಯರವರ ಪುತ್ರಿ ಪ್ರಧನ್ಯಳಿಗೆ ವೈದ್ಯಕೀಯ ನೆರವು ನೀಡಲಾಯಿತು.
ಈಕೆಯ ವೈದ್ಯಕೀಯ ಚಿಕಿತ್ಸೆಗೆ ಸುಮಾರು 12,000 ರೂ ಸಹಾಯಧನವನ್ನು ಬುಧವಾರ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಪ್ರಧನ್ಯಳ ಪೋಷಕರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ವಿಜಯ್ ಆಚಾರ್ಯ, ಕಾರ್ಯದರ್ಶಿ ದಿನೇಶ್ ಬಾಂಧವ್ಯ, ಗೌರವಾಧ್ಯಕ್ಷರಾದ ನಾರಾಯಣ್ ವಿ ಆಚಾರ್ಯ,ಮತ್ತು ಕಳಿಬೈಲ್ ಅಭಿಜಿತ್ ಪಾಂಡೇಶ್ವರ, ರವಿ ಪೂಜಾರಿ, ರವೀಶ್ ಶ್ರೀಯಾನ್, ಗಣೇಶ್ ಆಚಾರ್ಯ, ರವಿಕಿರಣ್ ಪೂಜಾರಿ, ರಾಕೇಶ್, ಆದರ್ಶ ಆಚಾರ್ಯ,ನಾಗೇಂದ್ರ ಶೆಟ್ಟಿ ಕಲ್ಯಾಣಿ ಸುಜಾತಾ ವಿಮಲಾ ಮತ್ತು ಮತ್ತಿತ್ತರು ಉಪಸ್ಥಿತರಿದ್ದರು. ಪಾಂಡೇಶ್ವರ ಮೂಡಹಡು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವೈದ್ಯಕೀಯ ನೆರವನ್ನು ಪ್ರಧನ್ಯಳ ಪೋಷಕರಿಗೆ ಹಸ್ತಾಂತರಿಸಲಾಯಿತು.
Leave a Reply