
ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕು ಕೊಕ್ಕರ್ಣೆಯಲ್ಲಿ ಭಗ್ನ ಪ್ರೇಮಿಯೊಬ್ಬ ಯುವತಿಗೆ ಚೂರಿ ಇರಿದು ಆಕೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು(ಸೆ.12) ಬೆಳಿಗ್ಗೆ ಸಂಭವಿಸಿದೆ.
ಗಂಭೀರ ಗಾಯಗೊಂಡ ಯುವತಿಯನ್ನು ಕೊಕ್ಕರ್ಣೆ ಪೂಜಾರಿ ಬೆಟ್ಟು ನಿವಾಸಿ ರಕ್ಷಿತಾ (20) ಎಂದು ತಿಳಿದು ಬಂದಿದೆ. ಚೂರಿ ಇರಿದ ಆರೋಪಿ ಕಾರ್ತಿಕ್ ಪೂಜಾರಿ ಎಂದು ಗುರುತಿಸಲಾಗಿದೆ..
ಯುವತಿ ಮಣಿಪಾಲದಲ್ಲಿ ಕೆಲಸಕ್ಕೆ ಹೋಗಲೆಂದು ಮನೆಯಿಂದ ಬರುವಾಗ ಕಾರ್ತಿಕ್ ಪೂಜಾರಿ ಎನ್ನುವಾತ ಏಕಾ ಏಕಿ ಬೈಕಿನಲ್ಲಿ ಬಂದು ನೇರವಾಗಿ ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದಾನೆ. ಇಂದು ಯುವತಿಯ ಹುಟ್ಟುಹಬ್ಬವಾಗಿದ್ದು ಹುಟ್ಟಿದ ದಿನವೇ ಯುವತಿ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಯುವತಿಗೆ ಚಾಕು ಚುಚ್ಚಿ ಯುವಕ ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಗಂಭೀರ ಗಾಯಗೊಂಡ ರಕ್ಷಿತಾ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾಳೆ ಎಂದು ಮಾಹಿತಿ ತಿಳಿದು ಬಂದಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Leave a Reply