Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಟೆನ್ನಿಸ್ ಬಾಲ್ ಕ್ರಿಕೆಟ್ ದಿಗ್ಗಜ ಅಲ್ ರೌಂಡರ್ ವಿನ್ಸಿ ಪಡುಬಿದ್ರೆ ಇನ್ನಿಲ್ಲ

ಪಡುಬಿದ್ರೆ : ಕರಾವಳಿಯ ಖ್ಯಾತ ಕ್ರಿಕೆಟಿಗ, ಪ್ರತಿಷ್ಠಿತ ರಾಜ್ಯಮಟ್ಟದ ಮತ್ತು ರಾಷ್ಟ್ರಿಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಕೂಟಗಳಲ್ಲಿ ತನ್ನ ಆಲ್ ರೌಂಡರ್ ಆಟದ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದ ವಿನ್ಸಿ ಪಡುಬಿದ್ರೆ ನಾಮಾಂಕಿತ  ವಿನ್ಸೆಂಟ್ ಫೆರ್ನಾಂಡಿಸ್ ಇಂದು ಮುಂಜಾನೆ ನಿಧನರಾಗಿದ್ದಾರೆ.

ಅವಿಭಾಜ್ಯತ ಜಿಲ್ಲೆಯ ಮತ್ತು ರಾಜ್ಯದ ಪ್ರತಿಷ್ಠಿತ ಪಡುಬಿದ್ರೆ ಫ್ರೆಂಡ್ಸ್ ಇದರ ಪ್ರಮುಖ ಆಟಗಾರರಾಗಿದ್ದ ವಿನ್ಸಿ ತನ್ನ 45ರ ಹರೆಯದಲ್ಲೂ ಬ್ಯಾಟಿನಲ್ಲಿ ಮಿಂಚು ಹರಿಸುತ್ತಿದ್ದರು. ಮೈದಾನದಲ್ಲಿ ಅತ್ಯಂತ ಶ್ರೇಷ್ಠ ಆಟಗಾರರಾಗಿದ್ದ ಇವರು ಕಳೆದ ಹಲವಾರು ವರ್ಷಗಳಿಂದ ಪಡುಬಿದ್ರೆಯಲ್ಲಿ ಕ್ರೀಡಾ ಮಳಿಗೆಯನ್ನು ಆರಂಭಿಸಿದ್ದರು. ರಾಜ್ಯದ ಮೂಲೆ ಮೂಲೆಗಳಲ್ಲಿ ಆಡಿದ ಅನುಭವವಿರುವ ಇವರು, ಯಾವುದೇ ರೀತಿಯ ಕ್ರಿಕೆಟಿಗೂ ಹೊಂದಿಕೊಳ್ಳುವಂತಹ ಆಟಗಾರ. ಪಾದರಸದಂತೆ ಮಿಂಚಿನ ಸಂಚಲನ ಉಂಟುಮಾಡುವ ಇವರ ಸಿಕ್ಸರ್ ಗಳನ್ನು ನೋಡುವುದೇ ಒಂದು ಚೆಂದ. ಹಿರಿಯ ಆಟಗಾರನಾದರೂ ಯುವ ಆಟಗಾರರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ ಇವರ ಜೀವಿತವಾದಿ ಇಂದು ಬೆಳ್ಳಂ ಬೆಳಗ್ಗೆ ಮುಕ್ತಾಯಗೊಂಡಿದೆ.

ತಾಯಿ, ಪತ್ನಿ, ಪುತ್ರಿ ಮತ್ತು ಅಪಾರ ಕ್ರೀಡಾಭಿಮಾನಿಗಳನ್ನು ಹೊಂದಿರುವ ವಿನ್ಸಿ ಪಡುಬಿದ್ರೆಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಜಾತಿ ಸಂಬಂಧಿತ ಪಂದ್ಯಕೂಟಗಳಲ್ಲಿ SFX Udyavara ತಂಡದಲ್ಲಿ ತಾವು ನೀಡಿದ ಶ್ರೇಷ್ಠ ಪ್ರದರ್ಶನ ನಿಜಕ್ಕೂ ಮರೆಯಲಾರದು.

ಮೈದಾನದಲ್ಲಿ ಆದ ಗಾಯವನ್ನಾದರೂ ಗುಣಪಡಿಸಬಹುದು. ಆದರೆ ಮನಸ್ಸಿಗೆ ಆದ ಗಾಯ ಗುಣಪಡಿಸಲು ಕಷ್ಟ.. ಕ್ರಿಕೆಟಿನಲ್ಲಿ ನೀವು ಮಾಡಿದ ಸಾಧನೆ ಮತ್ತು ಉದ್ಯಮದಲ್ಲಿ ನೀವು ಮಾಡಿದ ಉದ್ಯಮಶೀಲತೆ ನಿಮ್ಮ ನೈಜ್ಯ ಜೀವನದಲ್ಲಿ ಅಡವಡಿಸಲು ಕಷ್ಟವಾಯಿತೆ ?? ನಿಮ್ಮ ಜೊತೆ ಕೆಲವೇ ವರ್ಷಗಳ ಕ್ರಿಕೆಟಿನ ಬಾಂಧವ್ಯ ಖಂಡಿತ ಮರೆಯಲಾರದು. ತಾವು ಮಾತನಾಡುವ ರೀತಿ, ಸ್ಪಂದಿಸುವ ರೀತಿ, ಮೈದಾನದಲ್ಲಿ ಎಲ್ಲರ ಜೊತೆ ಒಗ್ಗಟ್ಟಿನ ಮಂತ್ರದ ರೂವಾರಿ, ಹೀಗೆ ತಮ್ಮ ಬಗ್ಗೆ ಹೇಳಲು ಮಾತಿಲ್ಲ ವಿನ್ಸಿ..

ವಿನ್ಸೆಂಟ್ ಫೆರ್ನಾಂಡಿಸ್ ರವರ ಅಂತ್ಯಕ್ರಿಯೆ ಇಂದು ಸಂಜೆ ಎರ್ಮಾಳ್ ಚರ್ಚಿನಲ್ಲಿ ನಡೆಯಲಿದೆ ಎಂಬ ಮಾಹಿತಿ ದೊರಕಿದೆ. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಹಿರಿಯ ದಿಗ್ಗಜ ಕ್ರಿಕೆಟಿಗರಿಗೆ ಗೌರವ ಸಲ್ಲಿಸಲು ಪ್ರಯತ್ನಿಸಿ ಮರೆಯಲಾರೆವು ವಿನ್ಸಿ ನಿಮ್ಮನ್ನು ಎಂದೆಂದಿಗೂ..

✍️ಸ್ಟೀವನ್ ಕುಲಾಸೊ ಉದ್ಯಾವರ

Leave a Reply

Your email address will not be published. Required fields are marked *