
ಕೋಟ: ಅಹಿಂಸಾತ್ಮಕ ರೀತಿಯಲ್ಲಿ ಅವಿರತವಾಗಿ ಹೋರಾಟ ನಡೆಸಿ ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ಭಾರತವನ್ನು ಸ್ವತಂತ್ರ ರಾಷ್ಟçವನ್ನಾಗಿಸುವ ಮೂಲಕ ಸತ್ಯ, ಶಾಂತಿ, ಅಹಿಂಸೆಯೇ ಯಶಸ್ಸಿನ ಮೂಲಮಂತ್ರವೆoದು ಜಗತ್ತಿಗೆ ತೋರಿಸಿಕೊಟ್ಟಿರುವ ಮಹಾತ್ಮ ಗಾಂಧೀಜಿಯವರು ಮಹಾನ್ ಅಹಿಂಸಾ ಪ್ರತಿಪಾದಕ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಹೇಳಿದರು.
ಗುರುವಾರ ಕೋಟ ಬ್ಲಾಕ್ ಕಾಂಗ್ರೆಸ್ನ ಇಂದಿರಾ ಭವನದಲ್ಲಿ ನಡೆದ ಮಹಾತ್ಮಾ ಗಾಂಧೀಜಿಯವರ ಹಾಗೂ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತಿçಯವರು ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತಿçಯವರ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪುಷ್ಪಾಚರಣೆ ಸಲ್ಲಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರಾದ ಶ್ರೀನಿವಾಸ್ ಅಮೀನ್, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ನ ಸಂಘಟನಾ ಕಾರ್ಯದರ್ಶಿ ಶೇಖರ್ ಪಿ ಮರಕಾಲ, ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಮಾಜಿ ಸದಸ್ಯರಾದ ಅಚ್ಚುತ್ ಪೂಜಾರಿ ಹಾಗೂ ಮಹಾಬಲ ಮಡಿವಾಳ, ಪಾಂಡೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವೈ. ಬಿ ರಾಘವೇಂದ್ರ, ಕುಂದಾಪುರ ವಿಧಾನಸಭಾ ಕ್ಷೇತ್ರದ ಅಕ್ರಮ- ಸಕ್ರಮ ಸದಸ್ಯರಾದ ರಾಜೇಶ್ ನೆಲ್ಲಿಬೆಟ್ಟು, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ರಮೇಶ್ ಮೆಂಡನ್ ಬಡಹೋಳಿ, ಯಾಶಿನ್ ಪಡುಕೆರೆ, ಸಚಿನ್ ಶೆಟ್ಟಿ ವಡ್ಡರ್ಸೆ, ನಾಗೇಶ್ ಪೂಜಾರಿ ಪಡುಕೆರೆ, ಸುರೇಶ್ ನೆಲ್ಲಿಬೆಟ್ಟು, ಗಿರೀಶ್ ತೋಡ್ಕಟ್ಟು, ರಮೇಶ್ ಮೂಡ್ಹೋಳಿ, ಮಂಜುನಾಥ್ ಪೂಜಾರಿ ಗುಂಡ್ಮಿ, ಹಾರುನ್ ಸಾಹೇಬ್ ಗುಂಡ್ಮಿ, ರಾಜು ಪೂಜಾರಿ ತೋಡ್ಕಟ್ಟು ಉಪಸ್ಥಿತರಿದ್ದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ಕೋಟ ವ್ಯವಸಾಯಕ ಬ್ಯಾಂಕ್ನ ನಿರ್ದೇಶಕರಾದ ರವೀಂದ್ರ ಕಾಮತ್ ಗುಂಡ್ಮಿ ಸ್ವಾಗತಿಸಿ ಧನ್ಯವಾದಿಸಿದರು.
ಕೋಟ ಬ್ಲಾಕ್ ಕಾಂಗ್ರೆಸ್ನ ಇಂದಿರಾ ಭವನದಲ್ಲಿ ನಡೆದ ಮಹಾತ್ಮಾ ಗಾಂಧೀಜಿಯವರ ಹಾಗೂ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತಿçಯವರು ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಪುಷ್ಪಾಚರಣೆ ಸಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರಾದ ಶ್ರೀನಿವಾಸ್ ಅಮೀನ್, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ನ ಸಂಘಟನಾ ಕಾರ್ಯದರ್ಶಿ ಶೇಖರ್ ಪಿ ಮರಕಾಲ, ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಮಾಜಿ ಸದಸ್ಯರಾದ ಅಚ್ಚುತ್ ಪೂಜಾರಿ ಇದ್ದರು.
Leave a Reply